ನವದೆಹಲಿ: ಜನಪ್ರಿಯ ಹಿಂದಿ ಧಾರಾವಾಹಿ “ಕ್ಯೂಂಕೀ ಸಾಸ್ ಭೀ ಕಭೀ ಬಹೂ ಥೀ’ಯ 2ನೇ ಆವೃತ್ತಿ ತೆರೆ ಬರಲು ಸಿದ್ಧತೆ ನಡೆಯುತ್ತಿದ್ದು, ಇದರಲ್ಲಿಯೂ ಮುಖ್ಯ ಪಾತ್ರಧಾರಿಯಾಗಿ ಮಾಜಿ ಸಚಿವೆ ಸ್ಮತಿ ಇರಾನಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇದಕ್ಕಾಗಿ ಸ್ಮತಿ ಜೆಡ್ ಪ್ಲಸ್ ಭದ್ರತೆಯ ನಡುವೆ ಚಿತ್ರೀಕರಣ ನಡೆಸುತ್ತಿದ್ದಾರೆ ಎಂದೂ ಕೆಲ ಮೂಲಗಳು ತಿಳಿಸಿವೆ.ಇದರೊಂದಿಗೆ ದಶಕಗಳ ಬಳಿಕ ಸ್ಮತಿ ಕಿರುತೆರೆಗೆ ಮರಳಲಿದ್ದಾರೆ.