ಬಾಗಲಕೋಟೆ : ಹುನಗುಂದ ತಾಲ್ಲೂಕಿನ ಬೆನಕಟ್ಟಿ, ಹಿರೇಮಾಗಿ ಗ್ರಾಮ ಪಂಚಾಯಿತಿ ಹಿರೇಮಾಗಿ ತಾಂಡಾ, ಸೂಳೇಭಾವಿ, ಅಮೀನಗಡದಲ್ಲಿ ವಿವಿಧ ಕಾಮಗಾರಿಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಪರಿಶೀಲನೆ ನಡೆಸಿದರು.
ಕಮತಗಿ ಪಟ್ಟಣದ ರಸ್ತೆ ಕಾಮಗಾರಿ, ಹಿರೇಮಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರ್ಸರಿಗೆ ಭೇಟಿ ನೀಡಿ ಅರಣ್ಯ ಇಲಾಖೆಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಸೂಳೇಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಇಲಾಖೆಯ ಗೋ ಕಟ್ಟೆ, ಚೆಕ್ ಡ್ಯಾಮ್, ವಿಕ್ಷಣೆ ಮಾಡಿ ಸಸಿ ನೆಟ್ಟು ನೀರುಣಿಸಿದರು.
ಬಳಿಕ ಇಳಕಲ್ಲ ತಾಲ್ಲೂಕಿನ ಕರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದ ವಿವೇಕ ಶಾಲೆ, ಹಾಗೂ ಮಲ್ಟಿ ವಿಲೇಜ್ ಸ್ಕೀಮ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ತಾಲ್ಲೂಕಿನ ಶಿಶು ಅಭಿವೃದ್ಧಿ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆಗೆ ಭೇಟಿ ಕಡತಗಳನ್ನು ಪರಿಶೀಲನೆ ನಡೆಸಿದರು.
ಜೊತೆಗೆ ತಾಲೂಕ ಪಂಚಾಯಿತಿ ಸಭಾ ಭವನದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಅವಳಿ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ಸೋಮಲಿಂಗಪ್ಪ ಅಂಟರಧಾನಿ, ಜೆಇ ಸೌಮ್ಯ ಭಾವಿಕಟ್ಟಿ, ತಾಂತ್ರಿಕ ಸಂಯೋಜಕ ನವೀನ್ ಹಂಚಾಟೆ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿ ಸಂಗಣ್ಣ ಕಳ್ಳೋಳ್ಳಿ, ಶಕುಂತಲಾ ಮೇಟಿ, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು