Ad imageAd image
- Advertisement -  - Advertisement -  - Advertisement - 

ಪೊಲೀಸ್ ಇಲಾಖೆಯಿಂದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕುಂದು ಕೊರತೆಗಳ ಸಭೆ

Bharath Vaibhav
ಪೊಲೀಸ್ ಇಲಾಖೆಯಿಂದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕುಂದು ಕೊರತೆಗಳ ಸಭೆ
WhatsApp Group Join Now
Telegram Group Join Now

ರಾಮದುರ್ಗ :-ತಾಲೂಕ್ ಪಂಚಾಯತ ಸಭಾಭವನದಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳ ಕುಂದು ಕೊರತೆಗಳ ಸಭೆ ನಡೆಸಲಾಯಿತು ಈ ಸಭೆಯಲ್ಲಿ ತಾಲ್ಲೂಕಿನ DYSP ಮತ್ತು ಸವದತ್ತಿ ಮುರಗೋಡ ಕಟಕೋಳ ಸೋರೆಬಾನ ಬಾಗದ CPI ಹಾಗೂ PSI ಈ ಸಭೆಯಲ್ಲಿ ಹಾಜರಿದ್ದು ಮತ್ತು ಸವದತ್ತಿ ಮುನವಳ್ಳಿ ಯರಗಟ್ಟಿ ರಾಮದುರ್ಗ ಪಟ್ಟಣದ ಹಾಗೂ ಗ್ರಾಮಗಳಿಂದ ಎಲ್ಲ ಅನುಸೂಚಿತ ಜಾತಿ ಮತ್ತು ಪಂಗಡಗಳ ಎಲ್ಲ ಮುಖಂಡರು ಪಾಲ್ಗೊಂಡಿದ್ದರು.

ಹೌದು, ಈ ಸಭೆಯಲ್ಲಿ ತಾಲ್ಲೂಕಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಯುವಕರು ಗಾಂಜಾ ಮತ್ತು ತಂಬಾಕು ಅಗೆಯುವವರ ಸಂಖ್ಯೆ ಹೆಚ್ಚಾಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ ಎಂಬ ಆರೋಪ ಮುಕ್ತಗೊಳಿಸಲು ಪೊಲೀಸ್‌ಇಲಾಖೆ ನಿರಂತರ ಪ್ರಯತ್ನ ಮಾಡುತ್ತದೆ ಎಂದು ಡಿವೈಎಸ್‌ಪಿ ಎಂ. ಪಾಂಡುರಂಗಯ್ಯ ಭರವಸೆ ನೀಡಿದರು

ರಾಮದುರ್ಗ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಅನುಸೂಚಿತ ಜಾತಿ ಮತ್ತು ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಪಟ್ಟಣದ
ಪರಿಶಿಷ್ಟ ಜಾತಿಯ ಕಾಲೋನಿಗಳಲ್ಲಿ ಪೊಲೀಸ್ ಬೀಟ್ ಪುಸ್ತಕ ಅಳವಡಿಸಬೇಕು. ನಿತ್ಯವೂ ಎಸ್ಸಿ ಕಾಲೋನಿಗಳಿಗೆ ಬೀಟ್‌ ಪೊಲೀಸರು ಭೇಟಿ ನೀಡಿ ಅಲ್ಲಿನವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಡಿ ಎಸ್‍ಎಸ್ ಸಂಚಾಲಕ ಗೋಪಾಲ ಮಾದರ ಹೇಳಿದರು.

ನಂತರ ಮಾತನಾಡಿದ ಸಮಾಜ ಸೇವಕರಾದ ಸಿದ್ದು ಮೇತ್ರಿ ಸಾ /.ಹುಲಕುಂದ ಇವರು ಗ್ರಾಮ ಪಂಚಾಯತಿ ವತಿಯಿಂದ 14.15ನೇ ಹಣಕಾಸು ಯೋಜನೆಯಲ್ಲಿನ ಹಣವನ್ನು ಸರಿಯಾಗಿ SC. ST ಜನರಿಗೆ ಉಪಯೋಗ ಮುಡ್ತಾಇಲ್ಲ ಮತ್ತು SC. ST ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಶಿಕ್ಷಣ ನಿಧಿಯಿಂದ ಅವರಿಗೆ ಪ್ರೋತ್ಸಾಹವಾಗಿ ಲ್ಯಾಪ್ಟಾಪ್ ಹಾಗೂ ಪುಸ್ತಕಗಳು ಯಾವುದು ಅವರಿಗೆ ಕೊಡ್ತಾಇಲ್ಲ. SC. ST ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲಾ ಮತ್ತು ಕುಡಿಯುವ ನೀರಿನ (Ro plant) ಅಳವಡಿಸಬೇಕು ಇರುವಂತ (Ro plant) ಸರಿ ವ್ಯವಸ್ಥೆಯಲ್ಲಿ ಇರುವುದಿಲ್ಲ. ಮತ್ತು ಗ್ರಾಮ ಪಂಚಾಯತಿಯಲ್ಲಿ ಕರಾ ವಸೂಲಿ ಮಾಡಿದ್ದಲ್ಲಿ ಅದರಿಂದ ಬಂದ ಹಣವನ್ನು 20% ಹಣವನ್ನು ಜನರಿಗೆ ಉಪಯೋಗ ಮಾಡುತ್ತಿಲ್ಲಾ ಇವೆಲ್ಲ ಇನ್ನು ಮುಂದಾದರು ಸಿಗಬೇಕೆಂದು ಮಾತನಾಡಿದರು.

ಪಟ್ಟಣದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರ ಪುತ್ಥಳಿ ಅನಾವರಣಕ್ಕೆ ಸರ್ಕಾರ ಸೂಕ್ತ ನಿವೇಶನ ಗೊತ್ತುಪಡಿಸಿ ಪರಿಶಿಷ್ಟ ಜನಾಂಗದವರಿಗೆ ಹಸ್ತಾಂತರಿಬೇಕು ಎಂದು ಮನವಿ ಮಾಡಿದರು.ತಮ್ಮೇಲ್ಲ ಸಮಸ್ಯೆಗಳನ್ನು ಮುಂದಿನ ಸಭೆಯೊಳಗೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಮತ್ತು ಏನೇ ಸಮಸ್ಯೆಗಳಿದ್ದರೂ ನೇರವಾಗಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸಿಪಿಐ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಪಿಎಸ್‌ಐ ಸುನೀಲಕುಮಾರ ನಾಯಕ ಸ್ವಾಗತಿಸಿದರು.

ವರದಿ:- ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
Share This Article
error: Content is protected !!