
ಚನ್ನಮ್ಮನ ಕಿತ್ತೂರು: ತಾಲೂಕಿನ ಬಸಾಪುರ ಶೀಗೆಹಳ್ಳಿ ಕೆಎ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ವಿಶಿಷ್ಟ ವಿಶ್ವಗುರು ಸಮಾನತೆಯ ಹರಿಕಾರ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪಾರ್ಷಣೆ ಮಾಡಿ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಿದರು. ವಿಶ್ವಗುರು ,ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಭಕ್ತಿ ಭಾವದಿಂದ ಸರಳ ರೀತಿಯಿಂದ ಆಚರಿಸಿದರು. ಮುಂಜಾನೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಬಸವೇಶ್ವರ ಭಾವ ಚಿತ್ರನಿಟ್ಟು ಪ್ರಮುಖ ಬೀದಿಗಳಲ್ಲಿ ವಾದ್ಯದೊಂದಿಗೆ ಮೇಳದೊಂದಿಗೆ ಮೆರವಣಿಗೆ ನಡೆಸಿದರು. ಬಸವೇಶ್ವರ ಬಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅಕ್ಷತೆ ಹಾಕಿ ಪೂಜೆ ಸಲ್ಲಿಸಿದರು. ಬಸವಣ್ಣನವರು ಜಾತಿ, ಭಾಷೆ, ಭೇದವಿಲ್ಲದೆ ಶರಣ ತತ್ವದಲ್ಲಿ, ಸಮಾನತೆ ಕಾಯಕ ನಿಷ್ಠೆಯಿಂದ ನಂಬಿಕೆಯುಳ್ಳವರು ನಿಜವಾದ ಶಿವಶರಣ ಶ್ರೀ ಜಗಜ್ಯೋತಿ ಬಸವಣ್ಣನವರು. ಈ ಸಂದರ್ಭದಲ್ಲಿ ಬಸಾಪುರ ಶೀಗೆಹಳ್ಳಿ ಕೆಎ ಗ್ರಾಮದ ಜನತೆ ಭಾಗವಹಿಸಿದ್ದರು. ರಾತ್ರಿ ಮಹಾ ಅನ್ನಪ್ರಸಾದ ಕಾರ್ಯಕ್ರಮ ಜರುಗಿತ್ತು.




