Ad imageAd image

50 ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ :ಶಾಸಕ ಹಂಪನಗೌಡ ಬಾದರ್ಲಿ

Bharath Vaibhav
50 ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ :ಶಾಸಕ ಹಂಪನಗೌಡ ಬಾದರ್ಲಿ
WhatsApp Group Join Now
Telegram Group Join Now

ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹಂಚಿನಾಳ ಗ್ರಾಮದಲ್ಲಿ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ಅವರು ಕೆ. ಹಂಚಿನಾಳ ಗ್ರಾಮಕ್ಕೆ ಈಗಾಗಲೇ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಅನುದಾನಗಳನ್ನು ನೀಡಿ ಗ್ರಾಮ ಅಭಿವೃದ್ಧಿಯಾಗಲು ಶ್ರಮಿಸಿದ್ದೇನೆ ಮತ್ತು ಈಗ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಹಾಗೂ ಶಾಸಕರ ಅನುದಾನದಲ್ಲಿ ಸುಮಾರು ೫೦,ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡುತ್ತಿದ್ದು, ನಿರ್ಮಾಣದ ಹೊಣೆಯನ್ನು ಕೆ.ಆರ್.ಐ.ಡಿ.ಎಲ್. ಇವರಿಗೆ ವಹಿಸಿಲಾಗಿದೆ, ನಿಗಧಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದ್ದು, ತಾಲೂಕಿನ ವಿವಿಧ ಸಮುದಾಯದ ಮುಖಂಡರು ತಮ್ಮ ಸಮುದಾಯಕ್ಕೆ ಸಮುದಾಯ ಭವನವನ್ನು ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದ್ದು, ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಎಲ್ಲಾ ಜನಾಂಗದ ಸಮುದಾಯದವರೆಗೂ ಸಮುದಾಯ ಭವನವನ್ನು ನಿರ್ಮಿಸಿ ಕೊಡಲು ಭರವಸೆ ನೀಡಿದರು.

ಈ ವೇಳೆ ಡಾ‌.ಯು.ಪಂಪಾಪತೆಪ್ಪ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಪ್ಪ ಧಡೇಸೂಗೂರು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್, ಗ್ಯಾರಂಟಿ ಸಮಿತಿಯ ಯೋಜನೆಗಳ ತಾಲೂಕು ಅಧ್ಯಕ್ಷರಾದ ವೈ.ಅನಿಲಕುಮಾರ, ಅಂಬಾಮಠ ದೇವಸ್ಥಾನದ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಮುಖಂಡರಾದ ತಿಮ್ಮಣ್ಣ ಸಾಹುಕಾರ್ ಕುರುಕುಂದಿ, ಎನ್.ವಿ.ಸತ್ಯನಾರಾಯಣ, ಶಂಭಣ್ಣ ಸಾಹುಕಾರ್, ಎಸ್.ಲಿಂಗರಾಜ, ಲಿಂಗಪ್ಪ ಉಮಲೂಟಿ, ಲಿಂಗಪ್ಪ ಗದ್ದಿ, ಲಿಂಗಪ್ಪ ಅಂಗಡಿ, ವೀರನಗೌಡ ಪೊಲೀಸ್ ಪಾಟೀಲ್, ಹಿರೇಲಿಂಗಪ್ಪ ಮಾಲಿ ಪಾಟೀಲ್, ಶೇಖರಗೌಡ ತುರಡಗಿ, ಲಕ್ಷ್ಮಯ್ಯ ಶ್ರೇಷ್ಟಿ, ಲಿಂಗರಾಜ ತುರಡಗಿ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!