Ad imageAd image

ಹುಬ್ಬಳ್ಳಿಯಲ್ಲಿ ತಪ್ಪಿತು ಘೋರ ದುರಂತ : ಮೇಲೆಯೇ 4 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ

Bharath Vaibhav
ಹುಬ್ಬಳ್ಳಿಯಲ್ಲಿ ತಪ್ಪಿತು ಘೋರ ದುರಂತ : ಮೇಲೆಯೇ 4 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ
WhatsApp Group Join Now
Telegram Group Join Now

ಹುಬ್ಬಳ್ಳಿ : ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನವೊಂದು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿದ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡದೊಂದು ವಿಮಾನ ದುರಂತ ತಪ್ಪಿದೆ.ವಾಮಾನ ವೈಪರೀತ್ಯ ಹಾಗೂ ತಾಂತ್ರಿಕ ದೋಷದಿಂದಾಗಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ನಾಲ್ಕು ಗಂಟೆಗಳ ಕಾಲ ಸಾವಿನ ದವಡೆಯಲ್ಲಿ ಸಿಲುಕಿ, ಅಕ್ಷರಶಃ ನರಕ ದರ್ಶನ ಮಾಡಿದ್ದಾರೆ.

ಹೈದರಾಬಾದ್‌ನಿಂದ ಹೊರಟಿದ್ದ ಫ್ಲೈ 91 (Fly 91) ಏರ್‌ಲೈನ್ಸ್ ವಿಮಾನವು ಸಂಜೆ 4:30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಏಕಾಏಕಿ ಪೈಲಟ್ ನಿಯಂತ್ರಣ ತಪ್ಪಿದೆ. ಈ ವೇಳೆ ವಿಮಾನದೊಳಗೆ ಪ್ರಯಾಣಿಕರು ಜೀವ ಭಯದಿಂದ ಕೂಗಾಟ, ಚೀರಾಟ ನಡೆಸಿದ್ದಾರೆ.

ನಾವು ಬದುಕುತ್ತೇವೆಯೋ ಇಲ್ಲವೋ ಎಂಬ ಆತಂಕ ಎದುರಾಗಿತ್ತು. ವಿಮಾನ ಕಂಟ್ರೋಲ್ ತಪ್ಪಿದಾಗ ಎಲ್ಲರೂ ಕಣ್ಣೀರು ಹಾಕುತ್ತಾ ದೇವರನ್ನು ಪ್ರಾರ್ಥಿಸುತ್ತಿದ್ದರು,” ಎಂದು ಪ್ರಯಾಣಿಕರು ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

4 ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಟ:

ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಮಾನವು ಸತತ ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಹಾರಾಟ ನಡೆಸಿದೆ. ಈ ಅವಧಿಯಲ್ಲಿ ವಿಮಾನವು ಈ ಕೆಳಗಿನ ಜಿಲ್ಲೆಗಳ ಮೇಲೆ ಸುತ್ತು ಹೊಡೆದಿದೆ:

ಕೊನೆಗೂ ಹುಬ್ಬಳ್ಳಿಯಲ್ಲಿ ಹವಾಮಾನ ಸಹಕರಿಸದ ಕಾರಣ ಮತ್ತು ತಾಂತ್ರಿಕ ದೋಷದ ಭೀತಿಯಿಂದಾಗಿ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು.

ಅದೃಷ್ಟವಶಾತ್ ರಾತ್ರಿ ವೇಳೆ ಬೆಂಗಳೂರಿನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!