ಚಿಂಚೋಳಿ : ಚಿಂಚೋಳಿ ಪಟ್ಟಣದ ತಾಲೂಕು ಆಡಳಿತ ಕಚೇರಿ ವತಿಯಿಂದ ಜಗಜ್ಯೋತಿ ಬಸವೇಶ್ವರವರ 893 ನೇ ಜಯಂತೋತ್ಸವವನ್ನು ಆಯೋಜನೆ ಮಾಡಲಾಯಿತು. ಈ ಕಾರ್ಯಕ್ರಮ ಸರ್ಕಾರದ ನೇಮದಂತೆ ತಾಲೂಕ ಆಡಳಿತ ಕಛೇರಿ ಆವರಣದಲ್ಲಿ ಆಯೋಜನೆ ಮಾಡಬೇಕಾಗಿತ್ತು.ಆದರೆ ಲಿಂಗಾಯತ ಸಮಾಜದ ಮುಖಂಡರ ಒಪ್ಪಿಗೆಯಿಂದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಲಾಯಿತು.
ತಾಲೂಕ ಆಡಳಿತದವರು ಜಯಂತೋತ್ಸವಕ್ಕೆ ಬೇಕಾಗುವಂತ ಖರ್ಚು ವೆಚ್ಚವನ್ನು ಸಮಾಜದ ಮುಖಂಡರ ಕೈಯಲ್ಲಿ ತಾಲೂಕ ಆಡಳಿತ ದಂಡಾಧಿಕಾರಿಗಳು ನೀಡಿರುತ್ತಾರೆ ಸಮಾಜದ ಮುಖಂಡರು ಜಯಂತಿ ಆಚರಣೆ ಮಾಡಲು ಬೇಕಾಗುವಂಥ ವ್ಯವಸ್ಥೆಗಳನ್ನು ತಾವೇ ಮಾಡಿಕೊಳ್ಳಬೇಕಾಗಿತ್ತು ಸಾರ್ವಜನಿಕ ಕೂಡಲು ಕುರ್ಚಿ ವ್ಯವಸ್ಥೆ ಟೆಂಟಿನ ವ್ಯವಸ್ಥೆ ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕಾಗಿತ್ತು ಕುಡಿಯುವ ನೀರಿನ ವ್ಯವಸ್ಥೆ ಊಟದ ವ್ಯವಸ್ಥೆಯಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ತಾಲೂಕು ಆಡಳಿತ ಅಧಿಕಾರಿಗಳಿಗೂ ಹಾಗೂ ಲಿಂಗಾಯತ ಸಮಾಜದ ಮುಖಂಡರ ನಡುವೆ ಕೆಲವು ನಿಮಿಷಗಳ ಕಾಲ ವಾಗ್ದಾಳಿ ಪ್ರಾರಂಭವಾಯಿತು ಹಾಗೂ ಸಮಾಜದ ಮುಖಂಡರು ಜಯಂತಿಯನ್ನು ಆಚರಣೆ ಮಾಡುವುದನ್ನು ತಡೆಗಟ್ಟಿ ಸಮಾಜದ ಮುಖಂಡರಿಂದ ಬೈಕಟ್ ಮಾಡಲಾಯಿತು.
ಅದಕ್ಕೆ ಚಿಂಚೋಳಿ ತಾಲೂಕಿನ ಗ್ರೇಟು ೨ ತಶಿಲ್ದಾರರು ಕೂಡ ಸಮಾಜದ ಮುಖಂಡರಿಗೆ ಬಹಳಷ್ಟು ಮನವರಿಕೆ ಹಾಗೂ ಮನವಲಿಸುವಂತಹ ಕಾರ್ಯ ಮಾಡಿದರು ಕೂಡ ಸಮಾಜದ ಮುಖಂಡರು ಅದಕ್ಕೆ ಒಪ್ಪದನೆ ಬಸವೇಶ್ವರ ವೃತ್ತದಲ್ಲಿ ಎಲ್ಲಾ ಸಮಾಜದ ಮುಖಂಡರು ಹೋಗಿ ಪ್ರತಿಭಟನೆಗೆ ಮುಂದಾದರು.ತಸಿಲ್ದಾರರು ತಾಲೂಕಿನ ಎಲ್ಲಾ ಆಡಳಿತ ಅಧಿಕಾರಿಗಳನ್ನು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಜಯಂತಿ ಆಚರಣೆ ಮಾಡಲು ಪ್ರಾರಂಭಿಸಿದ್ದರು ಅದಕ್ಕೂ ಕೂಡ ಸಮಾಜದ ಮುಖಂಡರು ತಡೆಗಟ್ಟಿದರು ನಂತರ ಎಲ್ಲಾ ಅಧಿಕಾರಿಗಳು ತಾಲೂಕ ಆಡಳಿತ ಕಚೇರಿ ಒಳಗಡೆ ಹೋಗಿ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಇದರಿಂದ ಬಸವೇಶ್ವರ ಅವರಿಗೆ ತಾಲೂಕ ಆಡಳಿತದವರು ಹಾಗೂ ಸಮಾಜದ ಮುಖಂಡರು ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿದ್ದರು. ಲಿಂಗಾಯತ ಸಮಾಜದ ಮುಖಂಡರು ಆಕ್ರೋಶ ಹೊರಗೆ ಹಾಕಿದರು ತಾಲೂಕ ಆಡಳಿತದ ಅಧಿಕಾರಿಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಧಿಕ್ಕಾರ ಹಾಗೂ ಘೋಷಣೆ ಹಾಕಿದರು ಹಾಗೂ ಕೆಲವೊಂದು ಮುಖಂಡರು ತಮ್ಮ ತಮ್ಮ ಅಭಿಪ್ರಾಯವನ್ನು ಆಡಳಿತ ಅಧಿಕಾರಿಗಳ ವಿರುದ್ಧ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಾದ ಗ್ರೇಟ್ ಟು ತಹಸೀಲ್ದಾರ್ ವೆಂಕಟೇಶ್ ದುಗನ್ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಕುಮಾರ ಚೌವ್ಹಾಣ.ಡಾ.ಗಫರ್. ಅನುಸೂಯ ಚೌವ್ಹಾಣ. ಕಾಶಿನಾಥ್ ಧನ್ನಿ. ಸಿಪಿಐ ಕಪಿಲ್. ಪಿಎಸ್ಐ ಗಂಗಮ್ಮ.ಕ್ಷೇತ್ರ ಶಿಕ್ಷಣಾಧಿಕಾರಿಗಳು ಲಕ್ಷ್ಮಯ್ಯ.ದೇವೇಂದ್ರಪ್ಪ ಹೋಳ್ಕರ್.ಜಯಪ್ಪ ಚಾಪರ್. ಮಲ್ಲಿಕಾರ್ಜುನ್ ಪಾಲಾಮೂರ್.ಗೌತಮ್ ಪಾಟೀಲ್.ಸಂಜು ಪಾಟೀಲ್ .ಅಜಿತ್ ಪಾಟೀಲ್ .ಶರಣು ಮುತ್ತಪ್ಪಳ್ಳಿ ಅನೇಕ ಲಿಂಗಾಯತ ಸಮಾಜದ ಮುಖಂಡರು ಉಪಸ್ಥಿತಿ ಇದ್ದರು.
ವರದಿ : ಸುನಿಲ್ ಸಲಗರ




