Ad imageAd image
- Advertisement -  - Advertisement -  - Advertisement - 

ಜಿಲ್ಲೆಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ ; ಮೃಣಾಲ ಹೆಬ್ಬಾಳ್ಕರ್

Bharath Vaibhav
ಜಿಲ್ಲೆಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ ; ಮೃಣಾಲ ಹೆಬ್ಬಾಳ್ಕರ್
WhatsApp Group Join Now
Telegram Group Join Now

ಬೆಳಗಾವಿ : ಇಡೀ ದೇಶದಲ್ಲೇ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುವ ಆಶಯ ಇದ್ದು; ಜಿಲ್ಲೆಯ ಜನರು ತಮಗೊಮ್ಮೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ.

ಗೋಕಾಕ ತಾಲೂಕಿನ ಹಿರೇನಂದಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಕಳೆದ ಇಪ್ಪತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ; ಹಾಗೆಯೇ ಕ್ಷೇತ್ರದ ಅಭಿವೃದ್ಧಿಗಾಗಿ ಜಿಲ್ಲೆಯ ಮಗನಾಗಿ, ನಿಮ್ಮ ಮನೆ ಮಗನಾಗಿ ಸದಾ ನಿಮ್ಮೆಲ್ಲರ ಸೇವೆ ಮಾಡಲು ನನಗೊಮ್ಮೆ ಅವಕಾಶ ಮಾಡಿಕೊಡುವಂತೆ ಅವರು ಮನವಿ ಮಾಡಿದರು.

ಕ್ಷೇತ್ರದ ಯಾವುದೇ ಕೆಲಸ ಕಾರ್ಯ ಇರಲಿ; ವೈಯಕ್ತಿಕವಾದ ಕೆಲಸವೇ ಆಗಲಿ, ಯಾವುದೇ ಕಾರಣಕ್ಕೂ ಜನರು ಹುಬ್ಬಳ್ಳಿಗೆ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ ಎಂದ ಮೃಣಾಲ ಹೆಬ್ಬಾಳ್ಕರ್, ನಾನು ನಿಮ್ಮ ಮನೆ ಮಗ; ಸದಾ ನಿಮ್ಮೊಂದಿಗೆ ಇರುವವನು; ನಿಮ್ಮ ಯಾವುದೇ ಕೆಲಸವಿರಲಿ; ಅದನ್ನು ಶಿರಸಾವಹಿಸಿ ಮಾಡಿಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು.

ರಾಜ್ಯದ ನಮ್ಮ ನಾಯಕರಾದ ಸಿದ್ದರಾಮಯ್ಯನವರು ಮತ್ತು ಸತೀಶ್ ಜಾರಕಿಹೊಳಿಯವರ ಆಶೀರ್ವಾದದಿಂದ ಬರುವ ದಿನಗಳಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಇಡೀ ದೇಶದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆನ್ನುವ ಆಶಯ ಇದೆ; ಯಾವುದೇ ರೀತಿಯಿಂದಲೂ ಜಿಲ್ಲೆಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ; ನಮ್ಮ ಯೋಜನೆಗಳು ಕೂಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಅವರು ಇದೇ ವೇಳೆ ಹೇಳಿದರು.

ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ತೇಜಸ್ವಿನಿ ಗೌಡ, ಸಿದ್ದಲಿಂಗಣ್ಣ ದಾಮ್ಲೆ, ಮಹಾಂತೇಶ್ ಕಡಾಡಿ, ಚಂದ್ರಶೇಖರ್ ಕೊಣ್ಣೂರ್, ದೇವರಾಜು ಕಗ್ಗೂರು, ಸುಭಾಷ್ ಅಕ್ಕಿ, ಸಂತೋಷ್ ಅಂಕಲಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!