
ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ
ನಾಲ್ವಡಿ ರವರು ಅಪರೂಪದ ಮಹಾರಾಜರು. ಇಡೀ ಜಗತ್ತೇ ಮೈಸೂರು ಕಡೆಗೆ ಮುಖ ಮಾಡುವಂತೆ ಮಾಡಿದ ಮಹಾರಾಜರು. ತಮ್ಮ ಅಧಿಕಾರದ ಅವಧಿಯಲ್ಲಿ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಿದ ಮಹಾನ್ ವ್ಯಕ್ತಿ. ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣ ,ನೀರಾವರಿ, ವಿಜ್ಞಾನ, ಕೈಗಾರಿಕೆ ,ಮಹಿಳಾ ಶಿಕ್ಷಣ, ಹಿಂದುಳಿದ ಹಾಗೂ ಬಡ ಜನರ ಬಗ್ಗೆ ಸಂವೇದನಾಶೀಲರಾಗಿ ಚಿಂತಿಸಿ ಪ್ರಗತಿಪರ ನಿರ್ಧಾರಗಳನ್ನು ಕೈಕೊಂಡು ಇತಿಹಾಸದಲ್ಲಿ ಮರೆಯಲಾಗದ ಮಹಾ ರಾಜರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ :- ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ,ಕಂದಾಯ ವಿಭಾಗದ ಅಧಿಕಾರಿ ದೇವರಾಜ, ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ ಬೇಗಂ , ನಿಸಾರ್ ಅಹಮದ್, ಜಿಲಾನಿ ಪಾಶ,ಪವನ್ ಕುಮಾರ್,ಬಸವರಾಜ ,ಕೃಷ್ಣ ಚಲುವಾದಿ, ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ

