ಹರಾರೆ(ಜಿಂಬಾಬ್ವೆ): ಐಪಿಎಲ್ ಹಾಗೂ ವಿವಿಧ ವಯೋಮಿತಿಯ ಕ್ರಿಕೆಟ್‌ನಲ್ಲಿ ದಾಖಲೆಗಳನ್ನು ಪುಡಿ ಪುಡಿ ಮಾಡಿದ್ದ ವೈಭವ ಸೂರ್ಯವಂಶಿ ಇಂದು ಅಂತಾರಾಷ್ಟಿçÃಯ ಕ್ರಿಕೆಟ್‌ನಲ್ಲಿ ದಾಖಲೆಗಳನ್ನು ಉಡೀಸ್ ಮಾಡಲು ಶುರು ಮಾಡಿದ್ದಾರೆ.
ಇಂದು ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟಿçÃಯ ಮಟ್ಟದಲ್ಲಿ ಅರ್ಧ ಶತಕಗಳಿಸಿ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ಬರೆಯಿಸಿಕೊಂಡರು.
ಇAದು ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟ್ವೆಂಟಿ-೨೦ ಯಲ್ಲಿ ಕೇವಲ ೧೯ ಎಸೆತಗಳಲ್ಲಿ ೪ ಬೌಂಡರಿ, ೪ ಸಿಕ್ಸರ್ ನೆರವಿನಿಂದ ಅರ್ಧ ಶತಕ ಗಳಿಸಿದ ೧೫ ರ ಹರೆಯದ ಕ್ರಿಕೆಟಿಗ ಅತಿ ಚಿಕ್ಕ ವಯಸ್ಸಿನಲ್ಲಿ ಟ್ವೆಂಟಿ-೨೦ ಯಲ್ಲಿ ಅರ್ಧ ಶತಕಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಇದಕ್ಕೆ ಮುನ್ನ ಗಿಬ್ರಾಲ್ಟರ್ ೧೬ ವರ್ಷ ೫೬ ದಿನಗಳ ವಯಸ್ಸಿನಲ್ಲಿ ಅರ್ಧ ಶತಕಗಳಿಸಿದ್ದು, ದಾಖಲೆಯಾಗಿತ್ತು.


