Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಗ್ನಿವೀರರಾಗಿ ಆಯ್ಕೆಯಾದ ಒಂದೇ ಶಾಲೆಯ ಕಲಿತ 17 ವಿದ್ಯಾರ್ಥಿಗಳು

Advertisement

ಧಾರವಾಡ : ಒಂದೇ ಶಾಲೆಯಲ್ಲಿ ಕಲಿತ ಒಟ್ಟು 17 ಜನ ಯುವಕರು ಇದೀಗ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. ಇಷ್ಟಕ್ಕೂ ಈ ಯುವಕರು ಯಾವ ಗ್ರಾಮದವರು? ಯಾವ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. 

ತಮ್ಮ ಶಿಕ್ಷಕರಿಂದ ಅಭಿನಂದನೆ ಪಡೆದುಕೊಳ್ಳುತ್ತಿರುವ ಈ ಯುವಕರು ಉಪ್ಪಿನ ಬೆಟಗೇರಿ ಕಲ್ಲೂರು ಹಾಗೂ ಹನುಮನಹಾಳ ಗ್ರಾಮದವರು ಈ ಎಲ್ಲ ಯುವಕರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪೂರ್ಣಗೊಳಿಸಿದ್ದು, ಉಪ್ಪಿನ ಬೆಟಗೇರಿ ಗ್ರಾಮದ ಎಸ್‌ಜಿವಿ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಇದೇ ಶಾಲೆಯಲ್ಲಿ ಕಲಿತ ಈ ಯುವಕರಿಗೆ ಭಾರತೀಯ ಸೇನೆ ಸೇರಬೇಕು ಎಂಬ ಆಸೆ ಇತ್ತು. ಆ ಆಸೆ ಹೊತ್ತುಕೊಂಡೇ ತಮ್ಮ ಗುರಿ ಸಾಧಿಸಲು ಪ್ರಯತ್ನ ಆರಂಭಿಸಿದ್ದರು.

 ನಿರಂತರ ಪರಿಶ್ರಮದ ಫಲವಾಗಿ ಇದೀಗ 17 ಜನ ಯುವಕರು ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಓರ್ವ ಯುವಕ ವಾಯುಸೇನೆಯ ಅಗ್ನಿವೀರನಾಗಿ ಆಯ್ಕೆಯಾಗಿದ್ದಾನೆ.

ಉಪ್ಪಿನಬೆಟಗೇರಿಯ ಶಂಕರ ಕುರಗುಂದ, ಶಿವಾನಂದ ಮಸೂತಿ, ನಿರಂಜನ ಹುಟಗಿ, ಕಲೀಂ ಮುಜಾವರ, ಈರಣ್ಣ ಮಸೂತಿ, ಗಂಗಾಧರ ಅಂಬಣ್ಣವರ, ಶಬ್ಬೀರ್ ನದಾಫ್ ಸೇರಿದಂತೆ ಒಟ್ಟು 7 ಯುವಕರು ಹಾಗೂ ಕಲ್ಲೂರಿನ ಅಭಿಷೇಕ ಚಿಕ್ಕಮಠ, ಪ್ರದೀಪ ಮರೇದ, ಕುಮಾರ ಬುಡರಕಟ್ಟಿ, ಈರಣ್ಣ ಮರೇದ, ಪ್ರದೀಪ ಶಿವಳ್ಳಿ, ಅಮೀತಪೀರ್ ಸೈಯದನವರ ಸೇರಿದಂತೆ ಒಟ್ಟು 6 ಯುವಕರು ಮತ್ತು ಹನುಮನಾಳ ಗ್ರಾಮದ ಗೋಪಾಲ ಅಂಗಡಿ, ಸೋಮಲಿಂಗ ಅಂಗಡಿ, ಗೋಪಾಲ ಗಬ್ಬೂರ ಮೆಳೆಪ್ಪ ಅಂಗಡಿ ಸೇರಿದಂತೆ ಒಟ್ಟು 4 ಯುವಕರು ಹೀಗೆ ಉಪ್ಪಿನಬೆಟಗೇರಿಯ ಶ್ರೀ ಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆಯಲ್ಲಿ ಕಲಿತ ಒಟ್ಟು 17 ಯುವಕರು ʻಅಗ್ನಿವೀರ'ರಾಗಿ ಆಯ್ಕೆಯಾಗಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಅಂತವರನ್ನು ಎಂದಿಗೂ ಮರೆಯದು: ಮಿರ್ಜಿಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ಅಪರಾಧವಲ್ಲ : ಸುಪ್ರೀಂ ಕೋರ್ಟ್ ಅಗ್ನಿವೀರರಾಗಿ ಆಯ್ಕೆಯಾದ ಒಂದೇ ಶಾಲೆಯ ಕಲಿತ 17 ವಿದ್ಯಾರ್ಥಿಗಳು ವಿಜಯಪುರ ಪಾನ್ ಶಾಪ್ ನಲ್ಲಿ ನಿಗೂಢ ಸ್ಫೋಟ : ಜನರಲ್ಲಿ ಆತಂಕ ಸಂಚರಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ದುರ್ಮರಣ 2013ರಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ : ಜಿ. ಪರಮೇಶ್ವರ್ಸರ್ಕಾರಿ ಕೆಲಸ ಕೊಡಿಸುವುದಾಗಿ ಉತ್ತರ ಕರ್ನಾಟಕದ 45 ಜನರಿಗೆ 5.35 ಕೋಟಿ ವಂಚನೆ : ಅಪ್ಪ ಮಗಳು ಅರೆಸ್ಟ್ ಬಿಜೆಪಿ ವಿರುದ್ಧ ಸೆಡ್ಡು : ಇಂದು 23 ರಾಜಕೀಯ ಪಕ್ಷಗಳಿಂದ ಇಂಡಿಯಾ ಮೈತ್ರಿಕೂಟದ ಸಭೆ ರೈತರಿಗೆ ವ್ಯಕ್ತಿಯಿಂದ ಕಳಪೆ ಬೀಜ ಮಾರಾಟ ಜಮೀರ್ ಅಹ್ಮದ್ ಖಾನ್ ವರಿಗೆ ಉಪಮುಖ್ಯಮಂತ್ರಿ, ಶಾಸಕ ಎಸ್.ಎನ್. ಸುಬ್ಬಾರೆಡ್ಡಿರವರಿಗೆ ಸಚಿವ ಸ್ಥಾನ ನೀಡುವಂತೆ  ಒತ್ತಾಯ