Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚೂಡಿದಾರ್ ಒಳಗಿತ್ತು 26.60 ಕೋಟಿ ರೂ. ಮೌಲ್ಯದ ಡ್ರಗ್ಸ್ : ಬೆಚ್ಚಿ ಬಿದ್ದ ಪೊಲೀಸರು

Advertisement

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru ) ಮಾದಕ ವಸ್ತು (illegal Substance ) ಜಾಲದ ವಿರುದ್ಧ ಸಮರ ಸಾರಿರುವ ಸಿಸಿಬಿ (Central Crime Branch) ಪೊಲೀಸರು ಮತ್ತೆ ಭರ್ಜರಿ ಬೇಟೆಯಾಡಿದ್ದಾರೆ.

ಮಹಿಳೆಯರ ಚೂಡಿದಾರ್ ವಸ್ತ್ರಗಳ ನಡುವೆ ಅಡಗಿಸಿ ತರಲಾಗುತ್ತಿದ್ದ ಬರೋಬ್ಬರಿ ₹26.60 ಕೋಟಿ ಮೌಲ್ಯದ ಎಂಡಿಎಂಎ (MDMA) ಮಾದಕ ವಸ್ತುವನ್ನು ಜಪ್ತಿ ಮಾಡಿದ್ದು, ಅಂತರರಾಜ್ಯ ಡ್ರಗ್ ಪೆಡ್ಲರ್‌ಗಳ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕಿದ್ದಾರೆ.

ದೊಡ್ಡ ಮಟ್ಟದ ವಸ್ತ್ರ ವ್ಯಾಪಾರದ ನೆಪದಲ್ಲಿ ನವದೆಹಲಿಯಿಂದ ಬೆಂಗಳೂರಿಗೆ ಚೂಡಿದಾರ್ ಬಟ್ಟೆಗಳ ಪಾರ್ಸಲ್ ಸಾಗಿಸಲಾಗುತ್ತಿತ್ತು.

ಈ ಬಟ್ಟೆಗಳ ಮಡಿಕೆಗಳ ಮಧ್ಯೆ ರಹಸ್ಯವಾಗಿ ಎಂಡಿಎಂಎ ಕ್ರಿಸ್ಟಲ್ ಹಾಗೂ ಕೊಕೇನ್ ಪೌಡರ್ ಅನ್ನು ಅಡಗಿಸಿಟ್ಟು ಸಾಗಣೆ ಮಾಡಲಾಗುತ್ತಿತ್ತು. ಪೊಲೀಸರ ಕಣ್ಣಿಗೆ ಮಣ್ಣೆರಚಲು ಜಾಲ ರೂಪಿಸಿದ್ದ ಈ ವಿಭಿನ್ನ ತಂತ್ರ ಸಿಸಿಬಿ ಅಧಿಕಾರಿಗಳ ಸೂಕ್ಷ್ಮ ಕಾರ್ಯಾಚರಣೆಯಿಂದಾಗಿ ತಕ್ಷಣಕ್ಕೆ ಬಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿಲ್ ಕುಮಾರ್, ಸತ್ಯಂ, ಕಲೀಮ್ ಹಾಗೂ ಕನ್ನಯ್ಯ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 12.925 ಕೆಜಿ ತೂಕದ ಎಂಡಿಎಂಎ ಹಾಗೂ 60 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.

 ದೆಹಲಿಯಲ್ಲಿದ್ದ ನೈಜೀರಿಯನ್ ಪ್ರಜೆಯಿಂದ ಈ ಡ್ರಗ್ಸ್ ಪಡೆದು, ಬೆಂಗಳೂರಿನ ಐಟಿ ನೌಕರರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಲು ಸಂಚು ರೂಪಿಸಲಾಗಿತ್ತು.

ಈ ಹಿಂದೆ ಸಿಸಿಬಿ ಬಲೆಗೆ ಬಿದ್ದಿದ್ದ ಪ್ರಮುಖ ಆರೋಪಿಗಳು ನೀಡಿದ ಸುಳಿವು ಆಧರಿಸಿ ಮಾದಕ ದ್ರವ್ಯ ನಿಗ್ರಹ ದಳ ಈ ಯಶಸ್ವಿ ದಾಳಿ ನಡೆಸಿದೆ.

 ಸದ್ಯ ರಾಜಧಾನಿಯಲ್ಲಿ ಮಾದಕ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ತನಿಖೆ ತೀವ್ರಗೊಳಿಸಲಾಗಿದ್ದು, ಈ ಅಂತರರಾಜ್ಯ ಕೃತ್ಯದ ಹಿಂದಿರುವ ಮೂಲ ಸರಬರಾಜುದಾರರಿಗಾಗಿ ಸಿಸಿಬಿ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಂಭಾವಿ ಪುರಸಭೆ ಅಧ್ಯಕ್ಷರಾಗಿ  : ಗಿರಿಜಾ ಆಯ್ಕೆ ಸೆರೆಂಟಿಕಾ ರಿನ್ಯೂವಬಲ್ಸ್ ಸಂಸ್ಥೆಯಿಂದ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ವಾಹನ ದೇಣಿಗೆ: ಸಾಮಾಜಿಕ ಸೇವೆಗೆ ಬೆಂಬಲಸಚಿವಾಕಾಂಕ್ಷಿಗಳಿಗೆ ನಿರಾಸೆ : ಸಂಪುಟ ವಿಸ್ತರಣೆ ಮುಂದೂಡಿಕೆ ಚೂಡಿದಾರ್ ಒಳಗಿತ್ತು 26.60 ಕೋಟಿ ರೂ. ಮೌಲ್ಯದ ಡ್ರಗ್ಸ್ : ಬೆಚ್ಚಿ ಬಿದ್ದ ಪೊಲೀಸರುಆಕ್ರಮ ಪಡಿತರ ಹಕ್ಕಿ ದಂಧೆ ಕೋರರನ್ನು ಬಂಧಿಸಲು ಡಿಎಸ್ಎಸ್ ಅಗ್ರಹ!ವಿದ್ಯಾರ್ಥಿಪರ ಧ್ವನಿ ಎತ್ತಿದ  ರಾಜ್ಯ ಬಿಜೆಪಿ ಎಸ್ ಟಿ  ಮೋರ್ಚ ಕಾರ್ಯಕಾರಿಣಿ  ಸಮಿತಿಯ ಸದಸ್ಯ ರಾಜುಅಧಿಕಾರಿದಿಂದ ಕೆಳಗಿಳಿದ ದೇಶದ ಅತಿ ಕಿರಿಯ ನಗರಸಭಾಧ್ಯಕ್ಷೆಯಾಗಿದ್ದ ದಿಯಾ ಜುಲೈ 25-26ರಂದು ರಾಜ್ಯಾದ್ಯಂತ ಎಸ್‌ಐಆರ್ ಬಗ್ಗೆ ಅಭಿಯಾನ : ಬಿ. ವೈ ವಿಜಯೇಂದ್ರ ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾಗುವ ಅಪರಿಚಿತ ವ್ಯಕ್ತಿಗಳಿಗೆ ಉಚಿತ ಚಿಕಿತ್ಸೆ : ಯು. ಟಿ ಖಾದರ್ ಘೋಷಣೆ ದಾಂಪತ್ಯ ಜೀವನದಲ್ಲಿ ಆಸಕ್ತಿ ಇಲ್ಲ ಎಂದು ವಿಚ್ಛೇದನ ಪಡೆಯುವಂತಿಲ್ಲ : ಹೈಕೋರ್ಟ್