LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಡಿಸೆಂಬರ್ 1ರೊಳಗೆ ರೈತರ ಖಾತೆಗೆ ₹5,000 ಬರ ಪರಿಹಾರ: ಜಿ. ಪರಮೇಶ್ವರ್ 

Advertisement

ಬೆಂಗಳೂರು: ಬರಪೀಡಿತ (Drought) ಪ್ರದೇಶಗಳ ರೈತರಿಗೆ ತಲಾ 5,000 ರೂಪಾಯಿಗಳ ಪರಿಹಾರವನ್ನು ಎರಡು ಕಂತುಗಳಲ್ಲೂ ಡಿಸೆಂಬರ್ 1ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ. ಪರಮೇಶ್ವರ  ತಿಳಿಸಿದರು.

ಇಂದು ವಿಕಾಸಸೌಧದಲ್ಲಿ‌ ಜಿಲ್ಲಾಧಿಕಾರಿಗಳು, ಡಿಡಿಎಲ್‌ಆರ್‌ಗಳು, ಉಪ ವಿಭಾಗಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೋಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಬರ ಪರಿಹಾರ: ಎರಡೂ ಕಂತು ಡಿಸೆಂಬರ್ 1ರೊಳಗೆ ರೈತರಿಗೆ ನೀಡುವ ಪರಿಹಾರವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. 

ಗ್ರೀನ್ ಲಿಸ್ಟ್‌ನಲ್ಲಿರುವ ಎಲ್ಲಾ ರೈತರಿಗೆ ಎರಡೂ ಕಂತುಗಳು ಡಿಸೆಂಬರ್ 1ರೊಳಗೆ ಖಾತೆಗೆ ತಲುಪಲಿವೆ ಎಂದು ಅವರು ಸ್ಪಷ್ಟಪಡಿಸಿದರು. ಈ ಕುರಿತು ಕೆಲವು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಉಂಟಾಗಿದ್ದ ಗೊಂದಲವನ್ನು ಈಗ ಪೂರ್ಣವಾಗಿ ನಿವಾರಿಸಲಾಗಿದೆ ಎಂದರು.

ಕೇಂದ್ರದ ಮೌನಕ್ಕೆ ತೀವ್ರ ಅಸಮಾಧಾನ: 'ಬರ ಪರಿಹಾರಕ್ಕಾಗಿ ಕೇಂದ್ರದಿಂದ 22,400.58 ಕೋಟಿ ರೂಪಾಯಿಗಳನ್ನು ಕೇಳಿದ್ದೇವೆ. ಇದಕ್ಕೆ ಇಲ್ಲಿಯ ತನಕ ಪ್ರತಿಕ್ರಿಯೆಯೇ ಬಂದಿಲ್ಲ. ಕೃಷಿ ಸಚಿವರು, ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಸಮಯ ಕೋರಿ ಪತ್ರ ಬರೆದಿದ್ದರೂ ಉತ್ತರ ಬಂದಿಲ್ಲ. ಇದು ಒಕ್ಕೂಟ ಸರ್ಕಾರಕ್ಕೆ ಭೂಷಣವಲ್ಲ. ಆದರೆ ನಾವು ಪ್ರಯತ್ನಗಳನ್ನು ನಿಲ್ಲಿಸಿಲ್ಲ' ಎಂದು ಅವರು ಹೇಳಿದರು.

ರಾಜ್ಯದಲ್ಲಿ 57.93 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆ ನಷ್ಟವಾಗಿದ್ದು, ಒಟ್ಟು ನಷ್ಟದ ಪ್ರಮಾಣ 62,481.88 ಕೋಟಿ ರೂಪಾಯಿಗಳಷ್ಟಿದೆ ಎಂದು ಅವರು ಮಾಹಿತಿ ನೀಡಿದರು.

 'ಕೇಂದ್ರದ ನೆರವು ಬಾರಲಿಲ್ಲ ಎಂದು ನಾವು ಸುಮ್ಮನಿರಲು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ರೈತರಿಗೆ ತಲಾ 5,000 ರೂಪಾಯಿಗಳ ಪರಿಹಾರವನ್ನು ಎರಡು ಹಂತದಲ್ಲಿ ಕೊಡುವುದಾಗಿ ಘೋಷಿಸಿದ್ದೆವು' ಎಂದರು.

ಕುಡಿಯುವ ನೀರಿಗೆ ಹೆಚ್ಚುವರಿ ಅನುದಾನ: ಕುಡಿಯುವ ನೀರಿಗಾಗಿ ಪ್ರತೀ ಕ್ಷೇತ್ರಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ; ಅಗತ್ಯವಿದ್ದರೆ ಇನ್ನೂ ಒಂದು ಕೋಟಿ ನೀಡಲು ಸರ್ಕಾರ ಸಿದ್ಧವಿದೆ.

 ಎಸ್‌ಡಿ‌ಆರ್‌ಎಫ್‌ನಲ್ಲಿ ಜಿಲ್ಲಾಧಿಕಾರಿಗಳ ಬಳಿಯೇ ಸುಮಾರು 379 ಕೋಟಿ ರೂಪಾಯಿ ಲಭ್ಯವಿದ್ದು, ಅದನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಹೊಸ ಕೊಳವೆ ಬಾವಿಗಳನ್ನು ಕೊರೆಯುವುದಷ್ಟೇ ಅಲ್ಲದೆ ಹಳೆಯ ಕೊಳವೆ ಬಾವಿಗಳ ನವೀಕರಣ ಮತ್ತು ಶುದ್ಧೀಕರಣಕ್ಕೂ ಸೂಚನೆ ನೀಡಲಾಗಿದೆ ಎಂದರು.

ಎಲ್ ನಿನೋ ಸಾಧ್ಯತೆಯನ್ನು ಮನಗಂಡು ಮುಂದಿನ ವರ್ಷದ ಮೇ ತಿಂಗಳತನಕ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಲಭ್ಯತೆ ಖಾತರಿಪಡಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST