LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಕೌಟುಂಬಿಕ ಕಲಹ : ಮನನೊಂದು ದಂಪತಿ ಆತ್ಮಹತ್ಯೆ

Advertisement

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. 

ಅಪ್ಪಾಶಿ ನಡುವಿನಮನಿ (35) ಹಾಗೂ ಅವರ ಪತ್ನಿ ರಾಜೇಶ್ವರಿ ನಡುವಿನಮನಿ (30) ನೇಣು ಬಿಗಿದುಕೊಂಡು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಹೆತ್ತವರಿಬ್ಬರ ಈ ದುರಂತ ಸಾವಿನಿಂದ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಅನಾಥರಾಗಿದ್ದು, ಇಡೀ ಊರಿನಲ್ಲಿ ಸೂತಕದ ಛಾಯೆ ಹಾಗೂ ವಿಷಾದ ಮೂಡಿದೆ.

ಅಪ್ಪಾಶಿ ಮತ್ತು ರಾಜೇಶ್ವರಿ ಅವರ ನಡುವೆ ಹಾಗೂ ಮನೆಯ ಇತರ ಸದಸ್ಯರ ನಡುವೆ ಹಲವು ವರ್ಷಗಳಿಂದ ಕೌಟುಂಬಿಕ ಕಾರಣಕ್ಕೆ ಭಿನ್ನಾಭಿಪ್ರಾಯ ಮತ್ತು ಜಗಳಗಳು ನಡೆಯುತ್ತಿದ್ದವು ಎಂದು ಹೇಳಲಾಗಿದೆ. 

ಇದೇ ಕಲಹದ ವಿಚಾರವಾಗಿ ದಂಪತಿ ಮಧ್ಯೆ ಪ್ರತಿದಿನವೂ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ. ಮನೆಯಲ್ಲಿ ದಿನನಿತ್ಯದ ಕಿರಿಕಿರಿ ಮತ್ತು ಜಗಳ ಹೆಚ್ಚಾದ ಕಾರಣ ದಂಪತಿ ಮಾನಸಿಕವಾಗಿ ಸಾಕಷ್ಟು ನೊಂದಿದ್ದರು ಎಂದು ಸ್ಥಳೀಯ ಮೂಲಗಳಿಂದ ಮಾಹಿತಿ ದೊರೆತಿದೆ.

ಮನೆಯಲ್ಲಿ ನಡೆಯುತ್ತಿದ್ದ ನಿರಂತರ ಜಗಳದಿಂದ ತೀವ್ರ ಬೇಸತ್ತ ಪತಿ ಅಪ್ಪಾಶಿ, ಮೊದಲು ಮನೆಯ ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕೊಟ್ಟಿಗೆಯಲ್ಲಿ ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡ ಪತ್ನಿ ರಾಜೇಶ್ವರಿ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. 

ಪತಿಯ ಅಗಲಿಕೆಯ ಆಘಾತವನ್ನು ಸಹಿಸಲಾರದೆ ರಾಜೇಶ್ವರಿ ಅವರೂ ಕೂಡ ಮನೆಯ ಕೋಣೆಯೊಳಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST