
ಕಾಯಕವೇ ಸರ್ವ ಶ್ರೇಷ್ಠ ಎಂದು ಜಗತ್ತಿಗೆ ಸಾರಿದ ಶರಣರಲ್ಲಿ ನೂಲಿಚಂದಯ್ಯನವರು ಕೂಡ ಒಬ್ಬರು ,ಅಂತಹ ಸರಳ ವ್ಯಕ್ತಿತ್ವದ ,ಶರಣರ ಸಾಲಲ್ಲಿ ನೂಲಿ ಚಂದಯ್ಯನವರ ಅದ್ಬುತ ಚಿಂತನೆ ಹಾಗೂ ಅವರ ಶುದ್ದ ಕಾಯಕ ಎಷ್ಟೇಂದರೆ ಕಿರಳಲ್ಲಿರುವ ಲಿಂಗ ಜಾರಿ ಬಿದ್ದರು ಸಹ ಅದನ್ನು ಕೈಗೆತ್ತಿಕೊಂಡು ಮತ್ತೆ ಧರಿಸಲಿಲ್ಲ
ಅಷ್ಟೊಂದು ಕಾಯಕದಲ್ಲಿ ಅವರು ಶ್ರೆದ್ದೆ,ಮತ್ತು ಭಕ್ತಿಯನ್ನು ಹೊಂದಿದ್ದರು. ಎಂದು ಸೂಳೇಭಾವಿ ಗ್ರಾಮದಲ್ಲಿ ೯೧೭ ನೆಯ ಶಿವಶರಣ ಶ್ರೀ ನೂಲಿ ಚಂದಯ್ಯನವರ ಜಯಂತಿಯನ್ನು ಉದ್ದೇಶಿಸಿ ಮಾಜಿ ಶಾಸಕ ಎಸ್,ಜಿ,ನಂಜಯ್ಯನಮಠ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಧುರಿಣರಾದ ಆರ್ ಪಿ ಕಲಬುರಗಿ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಯುವಕರು ಇಂದು ಸತ್ಯಶುದ್ದ ಕಾಯಕ ಮಾಡುವ ಮೂಲಕ ಒಳ್ಳೆಯ ಸಾಧನೆ ಮಾಡಬೇಕು ಸೋಮಾರಿಗಳಾಗಿ ಕಾಲಹರಣ ಮಾಡಬಾರದು ನಿಮಗೆ ಆರ್ಥಿಕ ಸಹಾಯ ಬೇಕಾದರೆ, ನಮ್ಮ ಬ್ಯಾಂಕ್ ನಿಮಗೆ ಸಾಲ ನೀಡುತ್ತದೆ
ಒಳ್ಳೆಯ ಯೋಜನೆ ಹಾಕಿಕೊಂಡು ದುಡಿಯುವ ಯುವಕರು ಮುಂದೆ ಬಂದರೆ ನಿಮಗೆ ಸಹಾಯ ಮಾಡಲು ಸಾದಾ ಸಿದ್ದ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಭೀಮನಗಡದ ಶಿವಶರಣ ಶ್ರೀ ಕಲ್ಲಿನಾಥ ಮಹಾಸ್ವಾಮಿಗಳು ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಶ್ರೀ ಎಸ್,ಜಿ,ನಂಜಯ್ಯನಮಠ ಅವರು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಶ್ರೀ ಯಮನಪ್ಪ ಭಜಂತ್ರಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ, ಮಹಾಂತಪ್ಪ ಭದ್ರಣ್ಣನವರ, ರೇವಣೆಪ್ಪ ರಾಮದುರ್ಗ , ಜಹಾಂಗೀರ್ ಜಾಗೀರದಾರ್,ರೋಮಣ್ಣ ಭಜಂತ್ರಿ ,ಬಸಪ್ಪ ಭಜಂತ್ರಿ, ಪ್ರಾಸ್ತಾವಿಕ ನುಡಿ ಶಿಕ್ಷಕ ಶ್ರೀ ತಮ್ಮಣ್ಣೆಪ್ಪ ಭಜಂತ್ರಿ, ಹೇಳಿದರು. ಸಮಾಜದ ಮುಖಂಡರಾದ ಬಸವಂತಪ್ಪ ಯರಗೇರಿ ವಿಜಯಶಂಕರ್ ಭಜಂತ್ರಿ, ಶರಣಪ್ಪ ಭಜಂತ್ರಿ, ಬೈಲಪ್ಪ ಭಜಂತ್ರಿ, ಹನಮಂತ ಭಜಂತ್ರಿ, ಹನಮಂತ ಹಿರೇಮನಿ, ಯಮನಪ್ಪ ಭಜಂತ್ರಿ ಅನೇಕರು ಉಪಸ್ಥಿತಿ ಇದ್ದರು.
ವರದಿ ದಾವಲ್ ಶೇಡಂ

