LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದಸರಾ ಜಂಬೂಸವಾರಿ ವೇಳೆ ಅವಘಡ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ 

Advertisement

ಶಿವಮೊಗ್ಗ : ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ದಿಕ್ಕಾಪಾಲಾಗಿ ಓಡಿದ ಘಟನೆ ಆತಂಕ ಸೃಷ್ಟಿಸಿದೆ. 

ಸಾವಿರಾರು ಜನರು ನೆರೆದಿದ್ದ ಸಂದರ್ಭದಲ್ಲಿ ಆನೆ ನಿಯಂತ್ರಣ ತಪ್ಪಿ ಓಡಿದ್ದರಿಂದ ಜನರು ಭಯಭೀತರಾದರು. ಘಟನೆಯಿಂದಾಗಿ ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ.

ಜನಸಂದಣಿ ಕಂಡು ಗಲಿಬಿಲಿಗೊಂಡ ಆನೆ

ಮೈಸೂರು ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಜಂಬೂಸವಾರಿ ಮೆರವಣಿಗೆಗಾಗಿ ಸಕ್ರೆಬೈಲು ಆನೆ ಬಿಡಾರದಿಂದ ಸಾಗರ, ಬಹದ್ದೂರ್ ಮತ್ತು ಸೋಮಣ್ಣ ಆನೆಗಳನ್ನು ಕರೆತರಲಾಗಿತ್ತು.

ಮೆರವಣಿಗೆಯಲ್ಲಿ ಸೋಮಣ್ಣ ಆನೆಯ ಮೇಲೆ ಬೆಳ್ಳಿಯ ಅಂಬಾರಿಯನ್ನು ಕಟ್ಟಿ ಸಿದ್ಧತೆ ಮಾಡಲಾಗಿತ್ತು. ಕೋಟೆ ಆಂಜನೇಯ ದೇವಸ್ಥಾನದ ಕಡೆಯಿಂದ ಮೆರವಣಿಗೆ ಸಾಗುತ್ತಿದ್ದ ವೇಳೆ, ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಮಾವುತನ ನಿಯಂತ್ರಣ ತಪ್ಪಿ ಓಡಲಾರಂಭಿಸಿದೆ.

ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ಕಂಡು ಆನೆ ಗಲಿಬಿಲಿಗೊಂಡು ಈ ರೀತಿ ವರ್ತಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಆನೆ ನಿಯಂತ್ರಣ ತಪ್ಪಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಬೆಳ್ಳಿಯ ಅಂಬಾರಿ ಕೆಳಕ್ಕೆ ಬಿದ್ದು ಹಾನಿ

ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಆತಂಕಕ್ಕೊಳಗಾದರು. ಆನೆಯ ಮೇಲಿದ್ದ ಬೆಳ್ಳಿಯ ಅಂಬಾರಿ ಕೆಳಕ್ಕೆ ಬಿದ್ದು ಹಾನಿಯಾಗಿದೆ.

ಆನೆ ನಿಯಂತ್ರಣ ತಪ್ಪಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆಗಳ ಆರೈಕೆ ತಂಡದವರು ಅದನ್ನು ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟರು. ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಅರಣ್ಯ ಅಧಿಕಾರಿಗಳು ಅರವಳಿಕೆ ಔಷಧ ನೀಡಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಚಾಲಕ: ಇಬ್ಬರ ಸ್ಥಿತಿ ಗಂಭೀರ ಪಾನಿ ಪುರಿ ತಿಂದು ಅನಾಹುತ : ಒಂದೇ ಕುಟುಂಬದ 7 ಮಂದಿ ಸಾವು ಬದುಕಿನ ಹೋರಾಟಪೊಲೀಸ್ ಸಿಬ್ಬಂದಿಗೆ ಶೀಘ್ರದಲ್ಲೇ ನೂತನ ವಿಸಿಲ್ ಗಾರ್ಡ್: ಡಿಕೆ ಶಿವಕುಮಾರ್ ಘೋಷಣೆ ಹಬ್ಬದ ದಿನವೇ ಬೆಳಗಾವಿಯಲ್ಲಿ ಪತ್ನಿಯ ಶೀಲ ಶಂಕಿಸಿ ಪ್ರಾಣ ತೆಗೆದ ಕುಡುಕ ಗಂಡಚಿಕ್ಕೋಡಿ : ಜಾತ್ರೆಯಲ್ಲಿ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರೈಲ್ವೆ ಇಲಾಖೆಯಲ್ಲಿ 1,200 ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನದಸರಾ ಜಂಬೂಸವಾರಿ ವೇಳೆ ಅವಘಡ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ಕರ್ನಾಟಕ- ಸೌರಾಸ್ಟ್ರ ರಣಜಿ ಪಂದ್ಯ ಡ್ರಾ ದಲ್ಲಿ ಅಂತ್ಯ 13 ಲಕ್ಷ ಫಾಲವರ್ಸ್‌ಗಳಿದ್ದ ಯೂಟ್ಯೂಬರ್ ಆತ್ಮಹತ್ಯೆಬಾಕ್ಸ್ ಆಫೀಸ್‌ನಲ್ಲಿ 'ಜೈಲರ್ 2' ಅಬ್ಬರ : ಕೇವಲ 6 ದಿನಗಳಲ್ಲಿ 541 ಕೋಟಿ ಗಳಿಕೆ