Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯುಗಾದಿ ನಂತರ ಶುಭ ಮತ್ತು ಅಶುಭ ದಿನಗಳೂ ಎದುರಾಗಲಿವೆ : ಕೋಡಿ ಶ್ರೀ 

Advertisement
ಹುಬ್ಬಳ್ಳಿ : ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ನುಡಿಯುವ ಭವಿಷ್ಯವಾಣಿಗಳು ನಿಜವಾಗುತ್ತವೆ, ಅನೇಕ ಬಾರಿ ಆಗಿವೆ ಎಂಬುವುದು ಹಲವರ ನಂಬಿಕೆ.

ರಾಜಕೀಯ ಕುರಿತು, ಮಳೆ-ಬೆಳೆ, ಸಾವು-ನೋವುಗಳು, ವಿಶ್ವಕ್ಕೆ ಮಾರಕವಾಗುವ ಕಾಯಿಲೆಗಳು, ಪ್ರಳಯ ಹೀಗೆ ಹಲವು ವಿಷಯಗಳ ಕುರಿತಂತೆ ಶ್ರೀಗಳು ಆಗಾಗ ಸೂಕ್ಷ್ಮವಾಗಿಯೇ ತಮ್ಮ ನುಡಿಗಳಲ್ಲಿ ಭವಿಷ್ಯ ನುಡಿಯುತ್ತಿರುತ್ತಾರೆ.

ಪ್ರಸ್ತುತ ರಾಜ್ಯ ಕಾಂಗ್ರೆಸ್​​ ಸರ್ಕಾರದಲ್ಲಿ ನಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ಬದಲಾವಣೆ, ಅಧಿಕಾರದ ಹಂಚಿಕೆ ಮಾತುಗಳು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಬಣದ ನಾಯಕರ ಬೇಡಿಕೆ, ದಲಿತ ಸಿಎಂ, ಸಿಎಂ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಣಗಳ ನಾಯಕರ ಬಹಿರಂಗ ಹೇಳಿಕೆಗಳು.. ಇತರೆ ರಾಜ್ಯ ರಾಜಕಾರಣದ ಚರ್ಚೆಗಳ ಕುರಿತು ಶ್ರೀಗಳು ಭವಿಷ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಯಾವ ಸಮಸ್ಯೆಗಳು ಸದ್ಯಕ್ಕೆ ಆಗುವ ಲಕ್ಷಣಗಳು ಇಲ್ಲ. ಪ್ರಸ್ತುತ ಯಾವ ತೊಂದರೆ, ಬೆಳವಣಿಗೆಗಳು ಸರ್ಕಾರದ ಮಟ್ಟದಲ್ಲಿ ಆಗಲ್ಲ. ಯುಗಾದಿ ಬಳಿಕವೇ ಎಲ್ಲವನ್ನೂ ವಿವರವಾಗಿ ಹೇಳುವೆ ಎಂದಿರುವ ಶ್ರೀಗಳ ಮಾತುಗಳು ಕುತೂಹಲ ಮೂಡಿಸುವೆ.

ಯುಗಾದಿ ನಂತದಲ್ಲಿ ರಾಜ್ಯದಲ್ಲಿ ಶುಭ ಮತ್ತು ಅಶುಭ ದಿನಗಳೂ ಎದುರಾಗಲಿವೆ. ಈಗ ಸವಿಸ್ತಾರವಾಗಿ ಹೇಳಲ್ಲ. ಅಲ್ಲದೇ ಈ ಬಾರಿ ಬಿಸಿಲು ಹೆಚ್ಚಳವಾಗಲಿದ್ದು, ಅಪಾಯಕಾರಿ ಧಗೆಯಿಂದ ದುಷ್ಪರಿಣಾಮ ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂದೂ ಪರೋಕ್ಷವಾಗಿ ನುಡಿದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಸಭೆ - ವಿಧಾನಪರಿಷತ್‌ನ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ : ಕಣದಲ್ಲಿ 8 ಜನನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗು : ಉಪ್ಪಿನಲ್ಲಿ ಮಲಗಿಸಿ ಖುರಾನ್ ಪಠಿಸಿದ ಪೋಷಕರು ಚೇಳೂರಿನಲ್ಲಿ ವಿಶೇಷ ಸ್ವಚ್ಛತಾ ಕಾರ್ಯ : ಪಿಡಿಒ ಕೆ. ವೆಂಕಟಾಚಲಪತಿ ನೇತೃತ್ವದಲ್ಲಿ ಕಸ ತೆರವುಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಅಂತವರನ್ನು ಎಂದಿಗೂ ಮರೆಯದು: ಮಿರ್ಜಿಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ಅಪರಾಧವಲ್ಲ : ಸುಪ್ರೀಂ ಕೋರ್ಟ್ ಅಗ್ನಿವೀರರಾಗಿ ಆಯ್ಕೆಯಾದ ಒಂದೇ ಶಾಲೆಯ ಕಲಿತ 17 ವಿದ್ಯಾರ್ಥಿಗಳು ವಿಜಯಪುರ ಪಾನ್ ಶಾಪ್ ನಲ್ಲಿ ನಿಗೂಢ ಸ್ಫೋಟ : ಜನರಲ್ಲಿ ಆತಂಕ ಸಂಚರಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ದುರ್ಮರಣ 2013ರಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ : ಜಿ. ಪರಮೇಶ್ವರ್ಸರ್ಕಾರಿ ಕೆಲಸ ಕೊಡಿಸುವುದಾಗಿ ಉತ್ತರ ಕರ್ನಾಟಕದ 45 ಜನರಿಗೆ 5.35 ಕೋಟಿ ವಂಚನೆ : ಅಪ್ಪ ಮಗಳು ಅರೆಸ್ಟ್