ಬೆಂಗಳೂರು: ಸೆಪ್ಟೆಂಬರ್ 11ರಂದು ದೇಶದ್ಯಾಂತ ಬ್ಯಾಂಕ್ ಯೂನಿಯನ್‌ಗಳು ಮುಷ್ಕರಕ್ಕೆ ಕರೆ ನೀಡಿದೆ. ವಾರಕ್ಕೆ ಐದು ದಿನಗಳ ಕೆಲಸದ ವಿಧಾನ, ಪಿಂಚಣಿಯ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೆ ಇಟ್ಟಿದ್ದು, ಇದರ ಪ್ರಭಾವ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಲಿದೆ.
ಬ್ಯಾಂಕ್ ಖಾತೆದಾರಿಗೆ ಬಿಗ್ ಅಲರ್ಟ್ ಇಲ್ಲಿದೆ. ಬ್ಯಾಂಕ್ ಸತತವಾಗಿ ನಾಲ್ಕು ದಿನಗಳ ಕಾಲ ಬಂದ್ ಆಗಲಿದೆ. ಬ್ಯಾಂಕ್ ನೌಕರರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡಿದ್ದು, ವಾರಕ್ಕೆ ಐದು ದಿನಗಳ ಕೆಲಸ ವಿಧಾನವನ್ನು ಜಾರಿ ಮಾಡಬೇಕು.
ಪಿಂಚಣಿ ಸಮಸ್ಯೆಗಳನ್ನು ತಕ್ಷಣದಿಂದಲೇ ಬಗೆಹರಿಸಬೇಕು. ಕೆಲಸ ಸಾಮರ್ಥ್ಯದ ಆಧಾರದ ಮೇಲೆ ಪ್ರೋತ್ಸಾಹ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಕೇಂದ್ರ ಸರ್ಕಾರ ಮೇಲೆ ಒತ್ತಡ ಹೇರಲು ಬ್ಯಾಂಕ ಯೂನಿಯನ್‌ಗಳು ಶುಕ್ರವಾರ ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರೊಂದಿಗೆ ನಾಳೆ ಅಂದರೆ ಸೆಪ್ಟೆಂಬರ್ 11 ರಿಂದ ಬ್ಯಾಂಕ್ ಸೇವೆಗಳಲ್ಲಿ ಸಮಸ್ಯೆಗಳು ಎದುರಾಗಲಿದೆ.
ಆ ಬಳಿ ಎರಡನೇ ಶನಿವಾರ ಮತ್ತು ಭಾನುವಾರ ರಜೆ ಇದ್ದು, ಸೋಮವಾರ ಗಣೇಶ ಚತುರ್ಥಿಯ ಇರುವುದರಿಂದ ಸಾರ್ವತ್ರೀಕ ರಜೆ ಇದ್ದು, ಸತತವಾಗಿ ನಾಲ್ಕು ದಿನಗಳು ಬಂದ್ ಇರಲಿದೆ.


