ಬೆಳಗಾವಿ: ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ, ಮೇ 31, 2026 ರಂದು ಬಸವ ಧರ್ಮ ವೇದಿಕೆ (ಡಾ. ಜಿ. ಪರಮೇಶ್ವರ ಬ್ರಿಗೇಡ್ ಕರ್ನಾಟಕ) ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ "ಬಸವಾದಿ ಶರಣರ ವಿಚಾರ ಸಂಕಿರಣ" ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಭಲವಾಡಿ ಗುರುಪೀಠ ಚಿತ್ರದುರ್ಗದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬಸವನಾಗ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ, ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪೂಜ್ಯ ಶ್ರೀಗಳ ಆಶೀರ್ವಚನ: ನಂತರ ಶರಣರ ವಿಚಾರಗಳನ್ನು ಪ್ರಸ್ತಾಪಿಸಿ ಮಾತನಾಡಿದ ಪೂಜ್ಯ ಮಹಾಸ್ವಾಮಿಗಳು, "ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಅಪ್ಪಾಜಿಯವರು ಹಾಗೂ ಜಾನಪದ ಹಾಡುಗಾರರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಇಂತಹ ಮಹನೀಯರ ವಿಚಾರಧಾರೆಗಳನ್ನು ನೆನೆಯುವುದು ಮತ್ತು ಆ ಮೂಲಕ ಶರಣರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಾವೆಲ್ಲರೂ ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮ ಪುಣ್ಯವೇ ಸರಿ" ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳು ಮತ್ತು ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ವಿಶೇಷ ಸನ್ಯಾನಿತರಾಗಿ ಬೆಂಗಳೂರಿನ 'ಕ್ರೈಂ ಪ್ರಪಂಚ' ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ಶ್ರೀ ವಿ. ಬಸವರಾಜು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ:
ಶ್ರೀ ಮೃತ್ಯುಂಜಯ ಬಡಿಗೇರ (ಸಮಾಜ ಸೇವಕರು, ಬೆಳಗಾವಿ)
ಶ್ರೀ ಮಹಾಬಲೇಶ್ವರ ಸಾಬಣ್ಣವರ (ತಬಲ ವಾದಕರು, ಬೆಳಗಾವಿ)
ಶ್ರೀ ದುರಗೇಶ ಮೇತ್ರಿ (ಬೆಳಗಾವಿ ಜಿಲ್ಲಾ ಭಲವಾಡಿ ಸಮಾಜದ ನಾಯಕರು)
ಶ್ರೀ ಲಕ್ಷ್ಮಣ ಇಂಗಳಿ ಗೋಕಾಕ್ (ಡಾ. ಜಿ. ಪರಮೇಶ್ವರ ಬ್ರಿಗೇಡ್ ಸದಸ್ಯರು) ಭಾಗವಹಿಸಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು.
ಕಾರ್ಯಕ್ರಮವನ್ನು ಬೆಳಗಾವಿಯ ರಾಜಕೀಯ ವಿಶ್ಲೇಷಕರಾದ ಹಾಗೂ ಕರ್ನಾಟಕ ದಲಿತ ಸಮಾಜದ ಮುಖಂಡರಾದ ಭಗವಾನ್ ಐಹೊಳಿ ಅವರು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಸದಾಶಿವಮಹಾಂತೇಶ್ ಎಸ್ ಹುಲಿಕಟ್ಟಿ

