Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್.ಎಸ್.ಎಲ್.ಸಿ. ಫಲಿತಾಂಶ : ಜಿಲ್ಲೆಗೆ ಎರಡನೇ ಸ್ಥಾನ ಪಡೆದ ತುರುವೇಕೆರೆ : ಬಿಇಒ ಸೋಮಶೇಖರ್

Advertisement
ಶೇ.95.19 ಫಲಿತಾಂಶ / 25 ಶಾಲೆಗಳಲ್ಲಿ ಶೇ.. 100 ಫಲಿತಾಂಶ / ಬಾಲಕಿಯರ ಮೇಲುಗೈ

ತುರುವೇಕೆರೆ : 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ – 01 ರ ಫಲಿತಾಂಶ ಬಂದಿದ್ದು, ತುರುವೇಕೆರೆ ತಾಲ್ಲೂಕು ಶೇ. 95.19 ಫಲಿತಾಂಶ ಪಡೆಯುವ ಮೂಲಕ ತುಮಕೂರು ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ತುರುವೇಕೆರೆ ತಾಲ್ಲೂಕು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸತತ ಮೂರನೇ ಬಾರಿಗೆ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದೆ. ತಾಲೂಕಿನ 54 ಶಾಲೆಗಳಲ್ಲಿ 1852 ವಿದ್ಯಾರ್ಥಿಗಳು (901 ಬಾಲಕರು, 951 ಬಾಲಕಿಯರು) ಈ ಬಾರಿ ಪರೀಕ್ಷೆ ಬರೆದಿದ್ದರು. ಈ ಪೈಕಿ ಒಟ್ಟು 1763 ವಿದ್ಯಾರ್ಥಿಗಳು (840 ಬಾಲಕರು, 923 ಬಾಲಕಿಯರು) ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 89 ವಿದ್ಯಾರ್ಥಿಗಳು ನಪಾಸಾಗಿದ್ದಾರೆ. ತಾಲ್ಲೂಕಿನ 54 ಶಾಲೆಗಳ ಪೈಕಿ 15 ಸರ್ಕಾರಿ ಶಾಲೆ, 3 ಅನುದಾನಿತ, 7 ಅನುದಾನ ರಹಿತ ಒಟ್ಟು 25 ಶಾಲೆಗಳು ಶೇ. 100 ಫಲಿತಾಂಶ ಪಡೆದಿದೆ ಎಂದು ಮಾಹಿತಿ ನೀಡಿದರು.

ತುರುವೇಕೆರೆ ಪ್ರಿಯಾ ಆಂಗ್ಲ ಪ್ರೌಢಶಾಲೆಯ ಹೇಮಶ್ರೀ ಎಂ. (616 ಅಂಕ) ಹಾಗೂ ಮಾಯಸಂದ್ರ ಟಿ.ಬಿ.ಕ್ರಾಸ್ ನ ಬಿಜಿಎಸ್ ಶಾಲೆಯ ಯಶವಂತ್ ಟಿ.ಪಿ. (616 ಅಂಕ) ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು, ತುರುವೇಕೆರೆ ಮುತ್ತುರಾಯನಗರದಲ್ಲಿರುವ ವಿಶ್ವವಿಜಯ ವಿದ್ಯಾಶಾಲೆಯ ಹರ್ಷಿಲ್ ಕೆ.ವೈ. (613) ಅಂಕ ಪಡೆದು ದ್ವಿತೀಯ ಸ್ಥಾನ, ಮಾಯಸಂದ್ರ ಟಿ.ಬಿ.ಕ್ರಾಸ್ ನ ಬಿಜಿಎಸ್ ಶಾಲೆಯ ದೀಕ್ಷಾ ಕೆ. (612) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ತಾಲೂಕಿನ ಅರೆಮಲ್ಲೇನಹಳ್ಳಿ, ಕೊಡಗೀಹಳ್ಳಿ, ಆಲದಹಳ್ಳಿ, ದೊಡ್ಡಗೊರಾಘಟ್ಟ, ಮುದ್ದನಹಳ್ಳಿ ಸರ್ಕಾರಿ ಪ್ರೌಢಶಾಲೆಗಳು, ದಬ್ಬೇಗಟ್ಟ, ಮಾವಿನಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, ಹುಲಿಕೆರೆ, ಕುರುಬರಹಳ್ಳಿ ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ದಂಡಿನಶಿವರ ಅಂಬೇಡ್ಕರ್ ವಸತಿ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ತುರುವೇಕೆರೆ ಜೆ.ಪಿ. ಆಂಗ್ಲ ಪ್ರೌಢಶಾಲೆ, ತುರುವೇಕೆರೆ ಪ್ರಿಯಾ ಆಂಗ್ಲ ಮಾಧ್ಯಮ ಶಾಲೆ, ತುರುವೇಕೆರೆ ಮುತ್ತುರಾಯನಗರ ವಿಶ್ವವಿಜಯ ವಿದ್ಯಾಶಾಲೆ, ತುರುವೇಕೆರೆ ಕಿತ್ತೂರು ಚೆನ್ನಮ್ಮ ವಸತಿ ಶಾಲೆ, ತುರುವೇಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಣಿಚೆಂಡೂರು ಕಿತ್ತೂರು ಚೆನ್ನಮ್ಮ ವಸತಿ ಶಾಲೆ, ಮಣಿಚೆಂಡೂರು ಇಂದಿರಾಗಾಂಧಿ ವಸತಿ ಶಾಲೆ, ದಂಡಿನಶಿವರ ಅಂಬೇಡ್ಕರ್ ವಸತಿ ಶಾಲೆ, ಲೋಕಮ್ಮನಹಳ್ಳಿ ರಾಮಾಂಜನೇಯ ಗ್ರಾಮಾಂತರ ಶಾಲೆ, ಆನೆಕೆರೆ ಗಂಗಾಧರೇಶ್ವರ ಗ್ರಾಮಾಂತರ ಶಾಲೆ, ಮಾಯಸಂದ್ರ ಬಿಜಿಎಸ್ ಶಾಲೆ, ಬಳ್ಳೆಕಟ್ಟೆ ಸೇಂಟ್ ಮೇರಿಸ್ ಹೈಸ್ಕೂಲ್, ಅಮ್ಮಸಂದ್ರ ಮೈಸೆಂಕೋ ಜೂನಿಯರ್ ಕಾಲೇಜ್, ತುರುವೇಕೆರೆ ಆದಿಚುಂಚನಗಿರಿ ಮಯೂರ ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದು ತಾಲೂಕಿಗೆ ಕೀರ್ತಿ ತಂದಿವೆ ಎಂದರು.

ತುರುವೇಕೆರೆ ತಾಲ್ಲೂಕು ಜಿಲ್ಲೆಗೆ ಎರಡನೇ ಸ್ಥಾನ ಬರಲು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸಹಕಾರ ನೀಡಿದ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ, ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಬೋಧಕ, ಬೋಧಕೇತರರಿಗೆ, ಪೋಷಕರಿಗೆ, ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.


ವರದಿ: ಗಿರೀಶ್ ಕೆ ಭಟ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ