LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದೀಪಾವಳಿಗೆ ಬಂಪರ್ ಗಿಫ್ಟ್ : ಗೃಹಲಕ್ಷ್ಮಿಯ 3 ಕಂತಿನ 6 ಸಾವಿರ ರೂ.ಹಣ ಬಿಡುಗಡೆ!

Advertisement

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಯ ಫಲಾನುಭವಿಗಳಿಗೆ ಹಬ್ಬದ ಶುಭ ಸುದ್ದಿ ಸಿಕ್ಕಿದ್ದು, 34, 35 ಹಾಗೂ 36ನೇ ಕಂತಿನ ಒಟ್ಟು ₹7,405.86 ಕೋಟಿ ಹಣವನ್ನು ಒಂದೇ ಬಾರಿಗೆ ಬಿಡುಗಡೆ ಮಾಡಲಾಗಿದೆ. 

34ನೇ ಕಂತಿನ ₹2,500 ಕೋಟಿ, 35ನೇ ಕಂತಿನ ₹2,452.93 ಕೋಟಿ ಮತ್ತು 36ನೇ ಕಂತಿನ ₹2,452.93 ಕೋಟಿ ಅನುದಾನವನ್ನು ಒಟ್ಟಾಗಿ ಬಿಡುಗಡೆ ಮಾಡಲಾಗಿದ್ದು, ಇದರಿಂದ ರಾಜ್ಯದ 1.24 ಕೋಟಿ ಮಹಿಳೆಯರ ಖಾತೆಗೆ ಹಣ ನೇರವಾಗಿ ತಲುಪಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ ಅವರು ಮಾಹಿತಿ ನೀಡಿದ್ದಾರೆ.

ಈ ಸತತ ಮೂರು ಕಂತುಗಳ ಬಿಡುಗಡೆಯಿಂದಾಗಿ ಯೋಜನೆಯಾರಂಭದಿಂದ ಅಕ್ಟೋಬರ್‌ವರೆಗೆ ಒಟ್ಟು ₹86,838.36 ಕೋಟಿ ಹಣ ಗೃಹಲಕ್ಷ್ಮಿ ಫಲಾನುಭವಿಗಳಿಗೆ ತಲುಪಿದಂತಾಗಿದ್ದು, ಪ್ರತಿ ಮಹಿಳೆಗೆ ಇದುವರೆಗೆ ಒಟ್ಟು ₹72,000 ತಲುಪಿದೆ. 

ದೀಪಾವಳಿ ಹಬ್ಬದ ಈ ಸುಸಂದರ್ಭದಲ್ಲಿ ಹಾಗೂ ಬರಗಾಲದ ಕಷ್ಟದ ಸಮಯದಲ್ಲಿ ಈ ಹಣ ಬಿಡುಗಡೆಯಾಗಿರುವುದು ರಾಜ್ಯದ ಗೃಹಿಣಿಯರಿಗೆ ಆರ್ಥಿಕವಾಗಿ ದೊಡ್ಡ ಶಕ್ತಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿರುವ ದಿನೇಶ್ ಗೂಳಿಗೌಡ ಅವರು, ಒಂದೇ ಬಾರಿಗೆ 3 ಕಂತಿನ ಹಣ ಬಿಡುಗಡೆ ಮಾಡಿದ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಬ್ಬು ಬೆಳೆಗಾರರ ಪ್ರತಿಭಟನೆ : ಅಸ್ವಸ್ಥ ರೈತನನ್ನ ನಿರ್ಜನ ಪ್ರದೇಶದಲ್ಲಿ ಬಿಟ್ಟ ಪೊಲೀಸ್..?? ಬಾಗಲಕೋಟೆಯಲ್ಲಿ ಉತಾರಕ್ಕೆ 10 ಸಾವಿರ ಲಂಚಕ್ಕೆ ಬೇಡಿಕೆ : ಮುಖ್ಯಾಧಿಕಾರಿ ಸೇರಿ ಮೂವರು ಲೋಕಾಯುಕ್ತ ಬಲೆಗೆಕುಡಿಯುವ ನೀರು, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆಜನವರಿ 17 ರ ವರೆಗೆ ರಣಜಿ ಟ್ರೋಫಿ ಪಂದ್ಯಗಳಿಗೆ ಬ್ರೇಕ್ ತಿಗಣೆಗಳಿಂದ ಕಾಪಾಡಮ್ಮಾ ಸವದತ್ತಿ ಯಲ್ಲಮ್ಮಾ : ಹುಂಡಿಯಲ್ಲಿ ಭಕ್ತನ ಹರಕೆಬಾಗಲಕೋಟೆಯಲ್ಲೂ ಸ್ಟಿಂಗ್, ಹನಿಟ್ರ್ಯಾಪ್ ಸದ್ದು: ವಿಜಯಾನಂದ‌ ಕಾಶಪ್ಪನವರ, ದೊಡ್ಡನಗೌಡ ಪಾಟೀಲ ಮಧ್ಯೆ ವಾಕ್ಸಮರಸಾರ್ವಜನಿಕರಿಗೆ ಶಾಕ್ ಮೇಲೆ ಶಾಕ್: ಸಕ್ಕರೆ ಕೆಜಿಗೆ 4 ರೂ. ಏರಿಕೆ ಮಾಡಿದ ಕೇಂದ್ರ ಸರ್ಕಾರ ಎಕ್ಸಪ್ರೆಸ್ ಬಸ್ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಎನ್.ಎಸ್. ಬೋಸರಾಜುವೆಸ್ಟ್ ಇಂಡೀಸ್ ಗೆ ಆರಂಭಿಕ ಅಘಾತ ಕಿಂಗ್ ಕೊಹ್ಲಿಗೆ ಮತ್ತೊಂದು ದಾಖಲೆ ಮೈಲಿಗಲ್ಲು