ನವದೆಹಲಿ: ವಿರಾಟ್ ಕೊಹ್ಲಿ (ಕಿಂಗ್ ಕೊಹ್ಲಿ) ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಮತ್ತೊಂದು ದಾಖಲೆಯ ಮೈಲಿಗಲ್ಲು ಸ್ಥಾಪಿಸಿದರು.
ಬುಧವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 51 ಎಸೆತಗಳಲ್ಲಿ 74 ರನ್ ಗಳಿಸಿದ ಅವರು ದ. ಆಪ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎಲ್ಲ ತಂಡಗಳ ಎದುರು 50 ಅಥವಾ 50 ಕ್ಕಿಂತ ಹೆಚ್ಚು ಸರಾ ಸರಿಯಲ್ಲಿ ರನ್ ಗಳಿಸಿದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಈ ಪಂದ್ಯಕ್ಕೆ ಮುನ್ನ ವಿರಾಟ್ ಕೊಹ್ಲಿ ಅವರ ರನ್ ಸರಾಸರಿ ನ್ಯೂಜಿಲೆಂಡ್ ವಿರುದ್ಧ 49.66 ಇತ್ತು. ನಿನ್ನೆಯ ಪಂದ್ಯದಲ್ಲಿ ಅವರು 51 ಎಸೆತಗಳಲ್ಲಿ 74 ರನ್ ಗಳಿಸಿದ್ದರಿಂದ ನ್ಯೂಜಿಲೆಂಡ್ ವಿರುದ್ಧ ಅವರ ರನ್ ಸರಾಸರಿ 51.53 ಕ್ಕೆ ಜಿಗಿಯಿತು.


