LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಇತಿಹಾಸ ಪುಟ ಸೇರಿದ ಸಿಸಿಬಿ : 'ಆಯಂಟಿ ರೌಡಿ ಸ್ಕ್ವಾಡ್' ಆಗಿ ಮರುನಾಮಕರಣ

Advertisement

ಬೆಂಗಳೂರು: ಸಿಸಿಬಿ (CCB) ವಿಭಾಗವನ್ನು ಸರ್ಕಾರವು ಆ್ಯಂಟಿ ರೌಡಿ ಸ್ಕ್ವಾಡ್ ಎಂದು ಮರುನಾಮಕರಣ ಮಾಡಿದೆ.

ಈ ನಿರ್ಧಾರವು ಸಿಸಿಬಿಯ ಸುದೀರ್ಘ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದೆ. ಈ ಘಟಕವು 1971ರಲ್ಲಿ ಸ್ಪೆಷಲ್ ಸ್ಕ್ವಾಡ್ ಎಂದು ಅಸ್ತಿತ್ವಕ್ಕೆ ಬಂದಿತ್ತು.

ಆಗ ಓರ್ವ ಎಸಿಪಿ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿತ್ತು. 1993ರಲ್ಲಿ ಇದನ್ನು ಸಿಸಿಬಿ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಅಂದಿನ ಸ್ಪೆಷಲ್ ಸ್ಕ್ವಾಡ್ ಅನ್ನು ಸಿಸಿಬಿ ಜೊತೆ ವಿಲೀನಗೊಳಿಸಲಾಯಿತು. ಕಾಲಾನಂತರದಲ್ಲಿ, 1994ರಲ್ಲಿ ಸಿಸಿಬಿಯನ್ನು ಮರುಸಂಘಟಿಸಿ ಡಿಸಿಪಿ ಮೇಲ್ವಿಚಾರಣೆಗೆ ಒಳಪಡಿಸಲಾಯಿತು. 

2002ರಲ್ಲಿ ಅಪರಾಧಗಳ ವರ್ಗೀಕರಣದ ಆಧಾರದ ಮೇಲೆ ವಿವಿಧ ವಿಭಾಗಗಳಿಗೆ ಜವಾಬ್ದಾರಿಗಳನ್ನು ನಿಗದಿಪಡಿಸಲಾಯಿತು. 2004ರಲ್ಲಿ ತನಿಖಾಧಿಕಾರಿಗಳ ನೇಮಕ ಮತ್ತು ತನಿಖಾ ಸಾಮರ್ಥ್ಯವನ್ನು ವಿಸ್ತರಿಸಲಾಯಿತು.

 2019ರಲ್ಲಿ ಸಿಸಿಬಿಯನ್ನು ಆರು ಪ್ರಮುಖ ವಿಭಾಗಗಳಾಗಿ ಪುನಾರಚಿಸಲಾಯಿತು. 2021ರಲ್ಲಿ ಸಿಸಿಬಿ ಅಧಿಕಾರಿಗಳ ತನಿಖಾ ಅಧಿಕಾರದ ಕುರಿತು ಸರ್ಕಾರದಿಂದ ಅಧಿಸೂಚನೆಯನ್ನು ಹೊರಡಿಸಲಾಯಿತು. 

ಇತ್ತೀಚೆಗೆ, 2024ರಲ್ಲಿ, ಸಿಸಿಬಿಗೆ ಸ್ಟೇಷನ್ ಮಾನ್ಯತೆ ಅಂದರೆ ಎಫ್‌ಐಆರ್ ದಾಖಲಿಸುವ ಅಧಿಕಾರವನ್ನು ನೀಡಲಾಗಿತ್ತು. ಇದೀಗ ಸರ್ಕಾರವು ಆ್ಯಂಟಿ ರೌಡಿ ಸ್ಕ್ವಾಡ್ ಎಂದು ಮರುನಾಮಕರಣ ಮಾಡುವ ಮೂಲಕ ಇತಿಹಾಸ ಪುಟ ಸೇರಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST