ರಾವಲಪಿಂಡಿ: ಪಾಕಿಸ್ತಾನ್ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆಲುವಿನತ್ತ ಸಾಗಿದೆ.
ಇಲ್ಲಿನ ರಾವಲಪಿಂಡಿ ಕ್ರಿಕೆಟ್ ಮೈದಾನದಲ್ಲಿ 3 ನೇ ದಿನದ ಆಟ ಮುಗಿದಾಗ ಶ್ರೀಲಂಕಾ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಗೆ 309 ರನ್ ಗಳಿಸಿದ್ದು, 82 ರನ್ ಗಳ ಮುನ್ನಡೆಯನ್ನು ಮಾತ್ರ ಹೊಂದಿದೆ. ಇನ್ನು ಒಂದು ವಿಕೆಟ್ ಮಾತ್ರ ಉಳಿಸಿಕೊಂಡಿರುವ ಶ್ರೀಲಂಕಾ ಸೋಲಿನ ಸುಳಿಗೆ ಸಿಲುಕಿದೆ.
ಸ್ಕೊರ್ ವಿವರ
ಶ್ರೀಲಂಕಾ 98 ಹಾಗೂ 9 ವಿಕೆಟ್ ಗೆ 309
ಪಾಕಿಸ್ತಾನ 325


