
ಇನ್ನು ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಸ್ವಾಮಿ ದಾಸ್ ಕೆಂಪೇನೂರ್ ಮಾತನಾಡಿ ಈ ಸಂಘಟನೆ ರಚನೆ ಮಾಡಲು ಮುಖ್ಯ ಉದ್ದೇಶ ಕಲ್ಯಾಣ ಕರ್ನಾಟಕದ ಗಡಿ ಭಾಗದಲ್ಲಿ ನಮ್ಮ ಕನ್ನಡದ ನಾಡ ನುಡಿ ನೆಲ ಜಲ ಸಾಹಿತ್ಯ ಸಂಸ್ಕೃತಿ ಆಚಾರ-ವಿಚಾರಗಳ ಉಳಿವಿಗೆ ಸದಾಬದ್ದರು ಮತ್ತು ನಮ್ಮ ಭಾಗಕ್ಕೆ ಬಂದಿರುವ ಯೋಜನೆಗಳು ಜನರಿಗೆ ಸಮರ್ಪಕವಾಗಿ ಮುಟ್ಟಬೇಕು ಕನ್ನಡದ ಉಳಿವಿಗಾಗಿ ಸರ್ಕಾರದ ಆದೇಶದಂತೆ ಕಚೇರಿಗಳಲ್ಲಿ ಶೇಕಡ 60ರಷ್ಟು ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕಗಳು ಅಳವಡಿಸಬೇಕು ಅಂದಾಗ ಮಾತ್ರ ನಮ್ಮ ಕನ್ನಡ ಭಾಷೆ ಉಳಿಯುತ್ತೆ ಆದ್ದರಿಂದ ಈ ನಮ್ಮ ಸಂಘಟನೆಯ ಮುಖಾಂತರ ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ಮಾಡಿ ಜನರೇ ಸೇವೆ ಮಾಡಲು ನಾವು ಸದಾ ಸಿದ್ದರೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಘಟಕದ ಜಿಲ್ಲಾ ಸಂಯೋಜಕ ಶಿವರಾಜ್ ಹಮಲ್ಪೂರ್. ಜಿಲ್ಲಾ ಉಪಾಧ್ಯಕ್ಷರಾದ ಅಂಬದಾಸ್ ಬೇಲೂರ. ಜಿಲ್ಲಾ ಕಾರ್ಯದರ್ಶಿ ಜೇಮ್ಸ್ ಇಶ್ಲಾಂಪುರ್. ಜಿಲ್ಲಾ ಕಾರ್ಯಕರ್ಣಿ ಸದಸ್ಯ ಕಮಲಹಾಸನ್ ಸೇರಿದಂತೆ ಸಂಘದ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ :- ಸೂರ್ಯಕಾಂತ್

