
ಈ ಸುಸಂದರ್ಭದಲ್ಲಿ ಪ್ರಶಸ್ತಿ ಪಡೆದ ವಿಶ್ವಕರ್ಮ ಸಮಾಜದ ಘಟಪ್ರಭಾ ಪಠ್ಠಣದ ಖ್ಯಾತ ವೈದ್ಯರಾದ ಶ್ರೀ ರಾಘವೇಂದ್ರ ಪತ್ತಾರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಭಾಗ್ಯಶ್ರೀ ಪತ್ತಾರ ಅವರಿಗೆ ಶ್ರೀ ಶಿರಸಂಗಿ ಕಾಳಿಕಾ ದೇವಸ್ಥಾನದ ಕ್ಷೇತ್ರದಲ್ಲಿ ಹಳೆ ಗೋದಿಯ ಅಮಾವಾಸ್ಯೆಯ ನಿಮಿತ್ಯ ಕಾರ್ಯಕ್ರಮದಲ್ಲಿ ಅವರನ್ನು ಸಮಾಜದ ಗಣ್ಯ ಮಾನ್ಯರು ಸತ್ಕಾರ ಮಾಡಿದರು ನಂತರ ಕಾರ್ಯಕ್ರಮ ಹಮ್ಮಿಕೊಂಡು ಅದರಲ್ಲಿ ಅವರನ್ನು ಅಂದರೆ ವೈದ್ಯ ದಂಪತಿಗಳನ್ನು ಸತ್ಕರಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿ ಅಧ್ಯಕ್ಷರಾದ ಪಿ ಬಿ ಬಡಿಗೇರ್ ಎಸ್ ಕೆ ಪತ್ತಾರ್ ಮೋಹನ್ ಪತ್ತಾರ್ ಹಿಡಕಲ್ ಕುಮಾರ್ ಶ್ರೀನಿವಾಸ್ ರಾಘವೇಂದ್ರ ಪತ್ತಾರ್, ಕುಮಾರಿ ಕರುಣಾ ರಾಘವೇಂದ್ರ ಪತ್ತಾರ, ಡಾಕ್ಟರ ಭಾಗ್ಯಶ್ರೀ ರಾಘವೇಂದ್ರ ಪತ್ತಾರ, ಶ್ರೀಕಾಂತ್ ಪತ್ತಾರ, ಹಾಗೂ ಸಾವಿರಾರು ಜನಸಂಖ್ಯೆ ಉಪಸ್ಥಿತರಿದ್ದರು.ಒಟ್ಟಿನಲ್ಲಿ ವಿಶ್ವಕರ್ಮ ಸಮಾಜದ ಗಣ್ಯಮಾಣ್ಯರು ಸಮಾಜದ ಕುರಿತು ಯಾವೂದೇ ಕೆಲಸ ಮಾಡಿದರು ಅಥವಾ ಪ್ರಶಸ್ತಿ ಪಡೆದರು ಸಮಾಜ ಗುರುತಿಸಿಕೊಡುವಲ್ಲಿ ಮುಂದಾಗಿದ್ದಾರೆ ಅವರಿಗೆ ಡಾಕ್ಟರ್ ಪತ್ತಾರ ಅವರು ಧನ್ಯವಾದಗಳನ್ನ ತಿಳಿಸಿದರು.
ವರದಿ ರಾಜು ಮುಂಡೆ .

