Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಲಿತ ಸಂಘಟನೆಗಳು ಬಾನು ಮುಷ್ತಾಕ್ 'ರಿಗೆ ಅವರ ಮನೆದೇವರಿಂದಲೇ ಪೂಜೆ ಮಾಡಬೇಕು 

Advertisement
ಬೆಂಗಳೂರು: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಬಾನು ಮುಷ್ತಾಕ್ ಅವರ ವಿರುದ್ಧ ಸರಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು.ಮಂಡ್ಯ ಜಿಲ್ಲೆಯಲ್ಲಿ ಬಾನು ಮುಷ್ತಾಕ್ ಅವರು ಚಪ್ಪಲಿ ಧರಿಸಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಫೋಟೊಗೆ ಪುಷ್ಪಾರ್ಚನೆ ಮಾಡಿದ್ದನ್ನು ನಾನು ಖಂಡತುಂಡವಾಗಿ ಖಂಡಿಸುತ್ತೇನೆ ಎಂದರು.

ಸರಕಾರ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನನ್ನ ಪ್ರಕಾರ ಬಾನು ಮುಷ್ತಾಕ್ ಅವರು ಅಲ್ಲಾಹರನ್ನು ಚಪ್ಪಲಿಗೆ ಹೋಲಿಸಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರರಿಗೂ ಅಪಮಾನ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

ಬಾನು ಮುಷ್ತಾಕ್ ಅವರು ಯಾರು ಅಂಬೇಡ್ಕರ್ ಅವರನ್ನು ದೇವರೆಂದು ನಂಬಿದ್ದಾರೋ ಅವರಿಗೆ ಅಪಮಾನ ಮಾಡಿದ್ದಾರೆ. ಹಿಂದೂಗಳಿಗೆ ಮತ್ತು ಮುಸಲ್ಮಾನರಿಗೆ ಅಪಮಾನ ಮಾಡಿದ ಅವರ ದುರಹಂಕಾರಕ್ಕೆ ನನ್ನ ಧಿಕ್ಕಾರವಿದೆ ಎಂದು ತಿಳಿಸಿದರು. ನಾವು ಅವರನ್ನು ದಸರಾ ಉದ್ಘಾಟನೆಗೆ ಕರೆದಾಗ ಹಲವರು ವಿರೋಧ ಮಾಡಿದ್ದರು.

ಅವರು ಕನ್ನಡದ ವಿರೋಧಿ ಎಂದು ವಿರೋಧಿಸಿದ್ದರು. ಅಂಥ ಸಮಯದಲ್ಲಿ ರಾಜ್ಯದಲ್ಲಿರುವ ಅನೇಕ ದಲಿತ ಸಂಘಟನೆಗಳು, ದಲಿತ ಹೋರಾಟಗಾರರು ಅವರಿಗೆ ಸಹಕಾರಕ್ಕೆ ನಿಂತಿದ್ದರು. ಈಗ ಆ ದಲಿತ ಸಂಘಟನೆಗಳ ಮುಖಂಡರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ದೇವರೆಂದು ನಂಬಿರುವ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಈ ರೀತಿ ಅಪಮಾನ ಮಾಡಿದ್ದರಿಂದ ಇನ್ನು ಮುಂದೆ ಇಡೀ ರಾಜ್ಯದಲ್ಲಿ ದಲಿತ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು, ಬಾನು ಮುಷ್ತಾಕ್ ಅವರಿಗೆ ಅವರ ಮನೆದೇವರಿಂದಲೇ ಅವರ ಪೂಜೆ ಮಾಡಬೇಕು; ಅವರಿಗೆ ಚಪ್ಪಲಿಯಿಂದಲೇ ಪೂಜೆ ಮಾಡಬೇಕು.

ಅದವರ ಮನೆದೇವರಾದ ಕಾರಣ ಅದನ್ನು ಅವರು ವಿರೋಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಅವರು ಎಲ್ಲಿಗೇ ಬಂದರೂ ದಲಿತ ಸಂಘಟನೆಗಳು, ಹಿಂದೂಗಳು, ಇಸ್ಲಾಂ ಸಮುದಾಯದವರು ಅವರಿಗೆ ಛೀಮಾರಿ ಹಾಕಬೇಕು ಎಂದು ವಿನಂತಿಸಿದರು.

ಇಸ್ಲಾಮಿನ ಅಥವಾ ಮುಸಲ್ಮಾನರ ದೇವರು ಅಲ್ಲಾಹ ಎಂಬುದು ಈ ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಆ ಕಾರಣಕ್ಕೆ ಇಸ್ಲಾಂ ಬಂಧುಗಳು ಅಲ್ಲಾಹನನ್ನು ಪ್ರಾರ್ಥಿಸುವವರು, ಅದಕ್ಕೆ ನಾವು ಕೂಡ ಅದನ್ನು ಗೌರವಿಸುತ್ತೇವೆ ಎಂದು ತಿಳಿಸಿದರು.

ಆದರೆ, ಬಾನು ಮುಷ್ತಾಕ್ ಅವರು ಚಪ್ಪಲಿ ನನ್ನ ಮನೆದೇವರು; ಆದ್ದರಿಂದ ನಾನು ಚಪ್ಪಲಿ ಧರಿಸಿಯೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಹೇಳಿ ಅವರ ನಡೆಯನ್ನು ಮತ್ತೊಮ್ಮೆ ಉದ್ಧಟತನದಿಂದ ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ ಅವರು ಕ್ಷಮೆಗೆ ಅರ್ಹರಲ್ಲ ಎಂದರು.

ಚಪ್ಪಲಿ ಹೊಲಿಯುವವರು ಮುಸಲ್ಮಾನ ಸಮುದಾಯದವರಲ್ಲ; ಅದು ಪರಿಶಿಷ್ಟ ಜಾತಿಯವರು ಹೊಲಿಯುವುದು; ನಮ್ಮ ಸಮುದಾಯ ಚಪ್ಪಲಿ ಹೊಲಿಯುತ್ತದೆ. ಆದರೆ, ನೀವು ಆ ಜಾತಿಗೆ ಸೇರಿದವರೇ? ಎಂದು ಕೇಳಿದರು.

ಒಂದು ಸಮಯ ನೀವು ಇವತ್ತು ಅಲ್ಲಾಹರನ್ನು ಅವರು ದೇವರು ಎಂದು ಪೂಜಿಸುವವರಿಗೆ ನಮ್ಮ ಮನೆದೇವರು ಚಪ್ಪಲಿ ಎಂದ ಮೇಲೆ ನೀವು ಯಾರನ್ನು ಯಾರಿಗೆ ಹೋಲಿಸಿದ್ದೀರಿ? ಎಂದು ಪ್ರಶ್ನಿಸಿದರು.

ಒಂದು ವೇಳೆ ಹಾಗೇನಾದರೂ ಇದ್ದರೆ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರು ಧರಿಸಿದ ಚಪ್ಪಲಿ ಅಥವಾ ಶೂ ನಿಮ್ಮ ಮನೆದೇವರಾಗಿರಬಹುದೇ ಬಾನು ಮುಷ್ತಾಕ್ ಅವರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಇನ್ನು ಮುಂದೆ ಡಾ. ಅಂಬೇಡ್ಕರ್ ಅವರು ಧರಿಸಿದ ಶೂ ಅಥವಾ ಚಪ್ಪಲಿಯನ್ನು ನಿಮ್ಮ ಮನೆದೇವರಾಗಿ ಸ್ವೀಕಾರ ಮಾಡುತ್ತೀರಾ ಎಂದು ಕೇಳಿದರು.ಇದನ್ನು ಇಸ್ಲಾಂ ಧರ್ಮ ಒಪ್ಪುತ್ತದೆಯೇ? ಇದನ್ನು ಕೇಳಿದ ಮೇಲೂ ಇಸ್ಲಾಂ ಧರ್ಮದ ಧರ್ಮಗುರುಗಳು, ಮುಲ್ಲಾಗಳು ಯಾಕೆ ತಟಸ್ಥರಾಗಿ ಕುಳಿತಿದ್ದಾರೆ? ನೀವು ಅವರನ್ನು ಯಾಕೆ ಪ್ರಶ್ನೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಬಾನು ಮುಷ್ತಾಕ್ ಅವರು ಇನ್ನು ಮುಂದೆ ಸಭೆ, ಸಮಾರಂಭಗಳಿಗೆ ಬಂದರೆ ಅವರ ಮನೆದೇವರಿಂದ ಅವರಿಗೆ ಹೊಡೆಯುವುದಾಗಿ ಜನರು ಮಾತನಾಡಲು ಪ್ರಾರಂಭಿಸಿದ್ದಾರೆ.

ಅವರ ಮನೆ ದೇವರು ಯಾವುದೆಂದು ಗೊತ್ತಾಯಿತಲ್ಲವೇ? ಒಂದು ವೇಳೆ ಅವರನ್ನು ಹೊಡೆದರೆ ಇದು ಮನೆದೇವರಿಂದ ಹೊಡೆದದ್ದು ಎಂದು ತಪ್ಪಾಗಿ ಗ್ರಹಿಸುವುದಿಲ್ಲ ಎಂದು ಬಾನು ಮುಷ್ತಾಕ್ ಅವರು ಅದನ್ನು ಸಹಿಸಿಕೊಳ್ಳುವರೇ ಎಂದು ಕೇಳಿದರು.

 

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ