ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಖಟಾರ್‌ನ ಆಟಗಾರ ಅಸ್ಸಿಯಾಮ ಮಡಿಬೋ ಅನುಚಿತ ಆಟಕ್ಕಾಗಿ ೫ ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದಾರೆ.
ಕೆನಡಾ ಹಾಗೂ ಖಟಾರ್ ನಡುವಿನ ಪಂದ್ಯದ ವೇಳೆ ೨೮ ವರ್ಷದ ಆಟಗಾರ ಅಸ್ಸಿಯಾಮ ಮಡಿಬೋ ಕೆನಡಾ ಆಟಗಾರನನ್ನು ಎಡಗಾಲಿನಿಂದ ಟ್ಯಾಕಲ್ ಮಾಡಿದ ರೀತಿ ಹಾಗೂ ಕೆನಡಾ ಆಟಗಾರ ಕೂಡ ಗಾಯಗೊಂಡರು. ಇದನ್ನು ಗಮನಿಸಿದ ಮೈದಾನ ಅಂಪೈಯರ್ ಹಾಗೂ ರೆಫರಿ ನೀಡಿದ ವರದಿ ಅನ್ವಯ ಮಡಿಬೋ ಮೇಲೆ ಮುಂದಿನ ೫ ಪಂದ್ಯಗಳನ್ನು ಆಡದಂತೆ ಕ್ರಮ ವಹಿಸಲಾಗಿದೆ.


