ನ್ಯಾಟಿಂಗ್‌ಹ್ಯಾಂ: ಆತಿಥೇಯ ಇಂಗ್ಲೆಂಡ್ ವಿರುದ್ಧ ಇಂದಿಲ್ಲಿ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೇ ೫೪ ರನ್‌ಗಳಿಸಿದ್ದು, ಉತ್ತಮ ಆರಂಭ ಮಾಡಿದೆ.
ಟಾಮ್ ಲ್ಯಾಥಮ್ ೩೦ ಹಾಗೂ ಡೆವೊನ್ ಕಾನ್ವೆ ೨೧ ರನ್‌ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಇದಕ್ಕೆ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.


