ಸಿಂಧನೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಿನ್ನೆಲೆಯಲ್ಲಿ ಡಿ ಕೆ.ಶಿವಕುಮಾರ್ ಬುಧವಾರ ಜೂನ್ 3ರಂದು ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಹೊಸ ಸಚಿವ ಸಂಪುಟದಲ್ಲಿ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಅವರನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ಪರಿಗಣಿಸಿ ಸಚಿವ ಸಂಪುಟದಲ್ಲಿ ಪ್ರಬಲವಾದ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು, ಒತ್ತಾಯಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಮೇಗಳಮನಿ ಬಸನಗೌಡ ಬಾದರ್ಲಿ ಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಿದರೆ ರಾಯಚೂರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಲಿವೆ ಸಿಂಧನೂರು ಅಭಿವೃದ್ಧಿಯ ಕನಸುಗಾರ ಸಾಮಾಜಿಕ ನ್ಯಾಯದ ಪರ ಧ್ವನಿಯಾಗಿರುವ ಹಾಗೂ ಲಿಂಗಾಯಿತ ಸಮುದಾಯದ ಭರವಸೆಯ ನಾಯಕ ಬಸನಗೌಡ ಬಾದರ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಯುವ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಪಕ್ಷದ ಬಲವರ್ಧನೆಗೆ ಹಗಲಿರಳು ಶ್ರಮಿಸಿ ತಾಲೂಕಿನ ಹಲವು ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಧ್ವನಿಯತ್ತಿ, ವಿಧಾನ ಪರಿಷತ್ ಸದಸ್ಯರು ಆದನಂತರ ಕ್ಷೇತ್ರದ ಸವಾಂಗಣ ಅಭಿವೃದ್ದಿಗಾಗಿ ಹಗಲಿರು ಶ್ರಮಿಸುತ್ತಿರುವ ನಮ್ಮ ನಾಯಕರಿಗೆ ಸಚಿವ ಸ್ಥಾನ ದೊರೆಯಲೆಂದು ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಹರಿಕೆ ಸಲ್ಲಿಸುವುದರ ಮೂಲಕ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಬಸನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.
ಈ ವೇಳೆ : ಯಡಗಿಬಾಳ ಮಂಜುನಾಥ್ ಗೊರೆಬಾಳ.ಎಂ. ಅಮರೇಗೌಡ ಗೋರೆಬಾಳ. ಎನ್. ದೇವೇಂದ್ರ ಗೌಡ ಗೋರೆಬಾಳ. ಪಿ. ಶರಣೇಗೌಡ ಗೊರೆಬಾಳ. ರಾಮನಗೌಡ ಬಸಾಪುರ. ಅನ್ನಪೂರ್ಣ ರೌಡಕುಂದ. ಲಿಂಗಾರಡ್ಡಿ ಸಾಸಲಮಾರಿ. ಪಂಪರೆಡ್ಡಿ ಹುಡಾ ಸೇರಿದಂತೆ ಗ್ರಾಮದ ಹಿರಿಯರು ಕಾರ್ಯಕರ್ತರು ಭಾಗವಹಿಸಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ

