ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವ ದಿನೇಶ್ ಗುಂಡೂರಾವ್, ವೀರ್ ಸಾರ್ವಕರ್ ಬ್ರಾಹಣ ಸಮುದಾಯದವರು ಅವರು ಕೂಡ ಮಾಂಸಾಹಾರ ಸೇವಿಸುತ್ತಿದ್ದರು.
ಮಹಾತ್ಮ ಗಾಂಧೀಜಿಯವರು ಸಸ್ಯಹಾರಿ ಆಗಿದ್ದರು. ಈ ಮೂಲಕ ಅವರೊಬ್ಬ ಮಾರ್ಡನಿಸ್ಟ್ ಆಗಿದ್ದರು ವೀರ್ ಸಾರ್ವಕರ್ ಮೂಲಭೂತವಾದಿ ಆಗಿದ್ದರು. ನಮ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದರು ದೇಶದಲ್ಲಿಂದು ದೊಡ್ಡ ಸಂಪ್ರದಾಯವಾದಿಗಳಿದ್ದಾರೆ. ಆದರೆ ಸಂಪ್ರದಾಯವಾದಿಗಳಲ್ಲ, ಮೂಲಭೂತವಾದಿಗಳೂ ಅಲ್ಲ. ಎಂದು ಹೇಳಿದ್ದಾರೆ.
ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರೆತು ಸಾವರ್ಕರ್ ವಾದ ಅಲ್ಲ. ಗಾಂಧೀಜಿಯವರ ಹತ್ಯೆ ಮಾಡಿದ ಗೋಡ್ಸೆ, ಸಾವರ್ಕರ್ ವಾದದಿಂದ ಪ್ರಭಾವಿತರಾಗಿದ್ದರು ಎಂದು ಹೇಳಿದ್ದಾರೆ.

