Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರಾವಣ ಮಾಸದ ನಿಮಿತ್ಯ ಶ್ರೀ ಸದ್ಗುರು ಅಜಾತನಾಗಲಿಂಗ ಸ್ವಾಮೀಜಿಗಳ ಪ್ರವಚನ 

Advertisement
ರಾಮದುರ್ಗ: ಗದುಗಿನ ಸದ್ಗುರು ಶಿವಾನಂದ ಸ್ವಾಮೀಜಿಗಳು ನವಲಗುಂದ ಅಜಾತ ನಾಗಲಿಂಗ ಶ್ರೀ ಕೃಪಾದೃಷ್ಟಿಯಿಂದ ಜನಿಸಿದವರು ಎಂದು ನವಲಗುಂದ ನಾಗಲಿಂಗ ಮಠದ ಶ್ರೀ ವೀರೇಂದ್ರ ಸ್ವಾಮೀಜಿ ಹೇಳಿದರು.



ಅವರು ತಾಲೂಕಿನ ಶಿವಪೇಠ ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಶ್ರೀ ಅಜಾತನಾಗಲಿಂಗ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮದಲ್ಲಿ ದಿವ್ಯ ಸನ್ನಿದಾನ ವಹಿಸಿ ಮಾತನಾಡುತ್ತಾ,ಶ್ರೀ ಶಿವಾನಂದರು ಬಾಲ್ಯಾವಸ್ಥೆಯಲ್ಲಿ ಮೌನಿಗಳಾಗಿದ್ದರು.

ಶ್ರೀ ಶಿವಾನಂದರ ಮೌನವು ಅವರ ಒಂಭತ್ತು ವರ್ಷ ವಯಸ್ಸಿನವರೆಗೆ ಮುಂದುವರಿಯಿತು. ಆಗ ಅವರು ತಮ್ಮ ಸ್ವರೂಪದ ಅಭ್ಯಾಸದಲ್ಲಿ ತೊಡಗಿದ್ದರು. ಒಮ್ಮೆ ಶ್ರೀ ನಾಗಲಿಂಗ ಸ್ವಾಮಿಗಳು ಸಮೀಪದ ಬಡಿಗೇರ ಶಾಲೆಯಲ್ಲಿಯ ಬಾಚಿಯನ್ನು ತೆಗೆದುಕೊಂಡು ಅದನ್ನು ಶ್ರೀ ಶಿವಾನಂದರಿಗೆ ತೋರಿಸಿ ಅದರಿಂದ ಶ್ರೀ ಶಿವಾನಂದರ ಶರೀರವನ್ನು ಚೂರುಚೂರಾಗಿ ಕತ್ತರಿಸಿ ಹಾಕುವರೆಂದು ಹೇಳಿದರು.

ಆಗ ಶ್ರೀ ಶಿವಾನಂದರು ಎಳ್ಳಷ್ಟೂ ಹೆದರದೆ ತಮ್ಮ ಕುತ್ತಿಗೆಯನ್ನು ಬಗ್ಗಿಸಿ 'ಅದನ್ನು ಬಾಚಿಯಿಂದ ಕಡಿದು ಹಾಕಿರಿ, ಇಲ್ಲದ ವಸ್ತು ಇಲ್ಲದಂತಾಗುತ್ತದೆ' ಎಂದು ಹೇಳಿದರು. ಈ ಘಟನೆಯು ಶ್ರೀ ಶಿವಾನಂದರು ಸಂಪೂರ್ಣ ನಿರ್ಭಯರಾಗಿದ್ದರೆಂಬುದನ್ನು ಸೂಚಿಸುತ್ತದೆ ನಾವು ನಿವೆಲ್ಲರೂ ಅವರ ಸನ್ಮಾರ್ಗದಲ್ಲಿ ನಡೆಯೋಣ ಎಂದು ಕರೆ ನೀಡಿದರು.
ನಿತ್ಯ ತಿಂಗಳ ಪರ್ಯಂತರ ಅಜಾತ ನಾಗಲಿಂಗ ಸ್ವಾಮೀಜಿಗಳ ಪ್ರವಚನವನ್ನು ಶ್ರೀ ಕಾಡಸಿದ್ದೇಶ್ವರ ಗುರೂಜಿ ಹೇಳಿದರು.
ಶಿವಪೇಠ ಗ್ರಾಮದ ಸದ್ಭಕ್ತರಿಂದ ನವಲಗುಂದ ನಾಗಲಿಂಗ ಸ್ವಾಮಿಗಳ ಮಠದ ಶ್ರೀ ವೀರೇಂದ್ರ ಸ್ವಾಮೀಜಿಗಳಿಗೆ ಸನ್ಮಾನಿಸಲಾಯಿತು. ಪತ್ರಕರ್ತರಾದ ಎಸ್ ಆರ್ ಗುರುಬಸಣ್ಣವರ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್