ಕಾರವಾರ: ಡಿ.ಕೆ. ಶಿವಕುಮಾರ್ ಅವರು ಎರಡು ವರ್ಷಕ್ಕೆ ಮುಖ್ಯಮಂತ್ರಿಯಲ್ಲ, ಅವರು ಮುಂದಿನ 7 ವರ್ಷದವರೆಗೂ ಮುಖ್ಯಮಂತ್ರಿ ಆಗಿರುವೆ ಎನ್ನುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ನೂತನ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪವಿಭಾಗ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಅವಲೋಕನ ನಡೆಸಿದ ಸಚಿವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂದಿನ ಡಿ.ಕೆ. ಶಿವಕುಮಾರ್ ಅವರಿಗೂ ಈಗಿನ ಡಿ.ಕೆ. ಶಿವಕುಮಾರ್ ಅವರಿಗೂ ಬಹಳಷ್ಟು ದೊಡ್ಡ ಬದಲಾವಣೆ ಕಾಣುತ್ತಿದೆ. ವಿಭಿನ್ನ ಕಾರ್ಯ ಶೈಲಿ ಇದೆ. ಮುಂದಿನ ಅವಧಿಗೂ ಕಾಂಗ್ರೆಸ್ ಸರ್ಕಾರವೇ ಬೇಕು ಎಂದು ಜನರಲ್ಲಿ ಭಾವನೆ ಮೂಡಿಸುವಂತೆ ಡಿ.ಕೆ. ಶಿವಕುಮಾರ್ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಚಿವರಾಗಿದ್ದೇವೆ ಎಂದು ಕ್ಷೇತ್ರಕ್ಕೆ ಹೋಗಿ ಹಾರ ತುರಾಯಿ ಹಾಕಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುವುದಕ್ಕಿಂತ ಜನರ ಸಂಕಷ್ಟ ಆರಿಸಲು ತಮ್ಮ ಉಸ್ತುವಾರಿ ಕ್ಷೇತ್ರಗಳಿಗೆ ಹೋಗುವಂತೆ ಸಿಎಂ ಸೂಚನೆ ನೀಡಿದ್ದರು.
ಅಂತೆಯೇ ಇಲ್ಲಿಗೆ ಬಂದಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ನಮಗೆ ಎರಡು ತಿಂಗಳು ಖಾತೆ ನೀಡಿರಲಿಲ್ಲ. ಹಾಗೆಯೇ ಇದ್ದೆವು. ಈಗ ಶೀಘ್ರವೇ ಖಾತೆ ಹಂಚಿಕೆ ಆಗಬಹುದು ಎಂದು ಹೇಳಿದ್ದಾರೆ.


