ನವದೆಹಲಿ : ಉಡುಪಿಯ(Udupi) ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಆಶೀರ್ವದಿಸಿದ್ದಾರೆ.
ಈ ವಿಶೇಷ ಹಾಗೂ ಆತ್ಮೀಯ ಭೇಟಿಯ ಸಂದರ್ಭದಲ್ಲಿ ಕರಾವಳಿಯ ಸಾಂಸ್ಕೃತಿಕ ಹಿರಿಮೆಯಾದ ಸುಂದರ ಯಕ್ಷಗಾನ ಕಿರೀಟವನ್ನು ಪ್ರಧಾನಿ ಮೋದಿಯವರಿಗೆ ತೊಡಿಸಿ, ಶಾಲು ಹೊದಿಸಿ ಆತ್ಮೀಯವಾಗಿ ಗೌರವಿಸಲಾಯಿತು.
ಈ ಶುಭ ಸಂದರ್ಭದಲ್ಲಿ ಉಡುಪಿ ಹಾಗೂ ಕರಾವಳಿ ಭಾಗದ ವೈಶಿಷ್ಟ್ಯಮಯ ಪರಂಪರೆಯನ್ನು ಬಿಂಬಿಸುವ ಸ್ಮರಣಿಕೆಗಳನ್ನು ಪ್ರಧಾನಿ ಅವರಿಗೆ ಹಸ್ತಾಂತರಿಸಲಾಯಿತು.
ತದನಂತರ ಉಡುಪಿಯ ಶ್ರೀ ಕೃಷ್ಣ ಮಠದ ಪ್ರಸಾದ ಹಾಗೂ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿ ಪೇಜಾವರ ಶ್ರೀಗಳು ಪ್ರಧಾನಿಯವರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.


