ರಾಜಸ್ಥಾನ : ಪತ್ನಿಯೊಂದಿಗೆ (Wife) ನಡೆದ ಜಗಳದ ಬಳಿಕ ವ್ಯಕ್ತಿಯೊಬ್ಬರು ತಾವು ಮನೆ ಖರೀದಿಗಾಗಿ ಕೂಡಿಟ್ಟಿದ್ದ 500 ರೂಪಾಯಿ ನೋಟುಗಳ ಕಟ್ಟಿಗೆ ಬೆಂಕಿ ಹಚ್ಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರಿ ಚರ್ಚೆಗೆ ಕಾರಣವಾಗಿದೆ.
ಪತ್ನಿ ಪತಿಗೆ ಸುಮಾರು 22,000 ರೂಪಾಯಿ ಬೆಲೆಯ ಸೂಟ್ ತೆಗೆದುಕೊಡಲು ಬಯಸಿದ್ದರು. ಆದರೆ ಪತಿ ಅಷ್ಟು ಹಣವನ್ನು ಬಟ್ಟೆಗೆ ಖರ್ಚು ಮಾಡುವ ಬದಲು ಉಳಿಸಿ ಸ್ವಂತ ಮನೆ ತೆಗೆದುಕೊಳ್ಳಬೇಕು ಎಂದಿದ್ದರು. ಈ ಭಿನ್ನಾಭಿಪ್ರಾಯವೇ ದೊಡ್ಡ ವಾಗ್ವಾದಕ್ಕೆ ತಿರುಗಿ ಬೇಸತ್ತ ಪತ್ನಿ ತವರು ಮನೆಗೆ ಹೋಗಿದ್ದರು.
ಇದ್ರಿಂದ ಕೋಪಗೊಂಡ ಪತಿ ಬ್ಯಾಂಕಿನಿಂದ ಮನೆಗಾಗಿ ಇಟ್ಟಿದ್ದ ಹಣವನ್ನು ತೆಗೆದು ತಂದು ನೋಟುಗಳನ್ನು ರಾಶಿ ಹಾಕಿ ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ನೋಟುಗಳು ಸುಟ್ಟು ಬೂದಿಯಾಗುತ್ತಿರುವ ದೃಶ್ಯ ಈಗ ವೈರಲ್ ಆಗಿದೆ. ಕೆಲವರು ಈ ನಡೆಯನ್ನು ಟೀಕಿಸಿದರೆ, ಇನ್ನು ಕೆಲವರು ವಿಡಿಯೋ ನಕಲಿ ಇರಬಹುದೇ, ನೋಟುಗಳು ನಿಜವೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ವಿಡಿಯೋದ ಸತ್ಯಾಸತ್ಯತೆ ಇನ್ನೂ ಖಚಿತವಾಗಿಲ್ಲ


