LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಒಂದೊಂದು ಹುದ್ದೆಗೆ ಒಂದೊಂದು ರೇಟ್ : ಕೆಪಿಎಸ್‌ಸಿ ಅಧ್ಯಕ್ಷಕನ ಲಂಚಾವತಾರ ಚಾರ್ಜ್‌ಶೀಟ್ ನಲ್ಲಿ ಉಲ್ಲೇಖ 

Advertisement

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳಷ್ಟೇ ಅಲ್ಲದೆ, ಹಿಂದಿನ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಅಧಿಕಾರಾವಧಿಯಲ್ಲಿ ನಡೆದ ಹಲವು ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮ ಹಣದ ವಹಿವಾಟು ನಡೆದಿದೆ ಎಂದು ಜಾರಿ ನಿರ್ದೇಶನಾಲಯ (ED) ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ (Breaking news) ಮಾಡಿದೆ.

KAS ಪೂರ್ವಭಾವಿ ಪರೀಕ್ಷೆ, ಸಹಾಯಕ ನಿಯಂತ್ರಕ, ಮೋಟಾರು ವಾಹನ ನಿರೀಕ್ಷಕ (MVI), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO), ಭೂದಾಖಲೆಗಳ ಸಹಾಯಕ ನಿರ್ದೇಶಕ, ಭೂವಿಜ್ಞಾನಿ ಹಾಗೂ ಗ್ರೂಪ್‌-ಸಿ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಸಂಬಂಧಿಸಿದ 16 ಪ್ರಶ್ನೆಪತ್ರಿಕೆಗಳ ಉತ್ತರ ಕೀಗಳು ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದಲ್ಲಿ ಪತ್ತೆಯಾಗಿದ್ದವು ಎಂದು ಇ.ಡಿ ಉಲ್ಲೇಖಿಸಿದೆ.

KAS ಸಂದರ್ಶನಕ್ಕೆ ₹1.25 ಕೋಟಿಗೆ ಬೇಡಿಕೆ

ಶಿವಶಂಕರಪ್ಪ ಸಾಹುಕಾರ್ ಅವರ ಆಪ್ತರೆಂದು ಹೇಳಲಾಗಿರುವ ಎಸ್.ಪಿ. ದಯಾನಂದ್ ಅವರ ಹೇಳಿಕೆಯ ಪ್ರಕಾರ, ಸಂತೋಷ್ ಎಂಬ ವ್ಯಕ್ತಿ KAS ಗ್ರೂಪ್‌-ಎ ಮತ್ತು ಬಿ ಸಂದರ್ಶನದಲ್ಲಿ ಅಭ್ಯರ್ಥಿಯೊಬ್ಬರಿಗೆ ಹೆಚ್ಚಿನ ಅಂಕ ಕೊಡಿಸುವಂತೆ ಶಿಫಾರಸು ಮಾಡಿದ್ದರು. ಇದಕ್ಕಾಗಿ ಶಿವಶಂಕರಪ್ಪ ಸಾಹುಕಾರ್ ₹1.25 ಕೋಟಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇನ್ನು KAS ಸಂದರ್ಶನದಲ್ಲಿ ಹೆಚ್ಚಿನ ಅಂಕ ಕೊಡಿಸಲು ಪ್ರತಿ ಅಭ್ಯರ್ಥಿಯಿಂದ ₹1.50 ಕೋಟಿಯಿಂದ ₹3 ಕೋಟಿ ವರೆಗೆ ಅಕ್ರಮ ಹಣ ಸಂಗ್ರಹಿಸಲಾಗುತ್ತಿತ್ತು ಎಂದು KPSCಯ ಆಗಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹೇಳಿಕೆ ನೀಡಿರುವುದಾಗಿಯೂ ಉಲ್ಲೇಖಿಸಲಾಗಿದೆ.

ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಸವರಾಜ್ ಕನ್ನಾಳೆ ಮತ್ತು ಪವನ್ ರೆಡ್ಡಿ ಮೂಲಕ ಪ್ರಶ್ನೆಪತ್ರಿಕೆಯಲ್ಲೇ ಸರಿಯಾದ ಉತ್ತರಗಳನ್ನು ಗುರುತಿಸಿ ಅಭ್ಯರ್ಥಿಗಳಿಗೆ ನೀಡುವ ಮೂಲಕ ಒಟ್ಟು 10 ಅಭ್ಯರ್ಥಿಗಳಿಂದ ₹3.20 ಕೋಟಿ ಬೇಡಿಕೆ ಇಡಲಾಗಿತ್ತು. ಈ ಪೈಕಿ ₹1.52 ಕೋಟಿ ಮಾತ್ರ ವಸೂಲಿಯಾಗಿರುವುದಾಗಿ ಇ.ಡಿ. ಲೆಕ್ಕಾಚಾರ ನೀಡಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಂದೊಂದು ಹುದ್ದೆಗೆ ಒಂದೊಂದು ರೇಟ್ : ಕೆಪಿಎಸ್‌ಸಿ ಅಧ್ಯಕ್ಷಕನ ಲಂಚಾವತಾರ ಚಾರ್ಜ್‌ಶೀಟ್ ನಲ್ಲಿ ಉಲ್ಲೇಖ ಪ್ರೀತಿಸಿ ಮದ್ವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣKPSC ಇತಿಹಾಸದಲ್ಲೇ ದಾಖಲೆ ವೇಗ: ಕೇವಲ 5 ದಿನದಲ್ಲಿ KAS ಪೂರ್ವಭಾವಿ ರಿಸಲ್ಟ್ಕ್ರೀಂ ಬಳಸಿ ಎಂದ ಯುಟ್ಯೂಬರ್​ ಮಾತು ನಂಬಿದ ಬಾಲಕಿ ಸಾವಿನಂಚಿನಲ್ಲಿ: ಕಿಡ್ನಿ ಫೇಲ್ಸೂರ್ಯಕುಮಾರ್ ಕಮ್ ಬ್ಯಾಕ್ : ಬಿಸಿಸಿಐ ಮೂಲಗಳ ನಿರಾಕರಣೆ ಕೊನೆಯ ದಿನ 8 ವಿಕೆಟ್ ಪಡೆದರೆ ಭಾರತ ತಂಡಕ್ಕೆ ಗೆಲುವು ಎಂಟು ವರ್ಷಗಳ ಬಳಿಕ ಲಡಾಕ್‌ನಲ್ಲಿ ಚುನಾವಣೆ : ಕೊರೆಯುವ ಚಳಿಯಲ್ಲೂ ಶೇ. 70ಕ್ಕೂ ಮತದಾನ ಕಾರು , ಬೈಕ್, ಕಳುವಾದರೆ ಇನ್ಮುಂದೆ ಠಾಣೆಗೆ ಬರೋದು ಬೇಡ : ಮೊಬೈಲ್‌ನಲ್ಲೇ ದಾಖಲಿಸಿ ಎ-ಎಫ್ ಐಆರ್ ಬ್ಲಿಂಕಿಟ್ ಆಂಬ್ಯುಲೆನ್ಸ್ ಸೇವೆ ಆರಂಭ : ಆಯಪ್ ಮೂಲಕವೇ ಬುಕ್ಕಿಂಗ್ ಅತಿ ಹೆಚ್ಚು ವೇತನ ಪಡೆಯುವ ಮಹಿಳೆಯರ ಪಟ್ಟಿ ಬಿಡುಗಡೆ : 87.50 ಕೋಟಿ ಪಡೆಯೋ ಕೊಡಗಿನ ಕುವರಿ