ಮುಂಬೈ : ಭಾರತ ಟಿ-20 ಕ್ರಿಕೆಟ್ ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಚುಟುಕು ಪಂದ್ಯಗಳಿಗಾಗಿ ಭಾರತ ತಂಡಕ್ಕೆ ಮರಳುವುದನ್ನು ಬಿಸಿಸಿಐ ಮೂಲಗಳು ನಿರಾಕರಿಸಿವೆ.
ಸೈಯದ ಮುಸ್ತಾಕ್ ಅಲಿ ರಾಷ್ಟ್ರೀಯ ಟಿ-20 ಪಂದ್ಯಾವಳಿಯ ಲೀಗ್ ಪಂದ್ಯವೊಂದರಲ್ಲಿ 29 ಎಸೆತಗಳಲ್ಲಿ ಸೂರ್ಯಕುಮಾರ್ 82 ರನ್ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಬಿಸಿಸಿಐ ಮೂಲಗಳು ಸೂರ್ಯ ಕುಮಾರ್ ತಂಡಕ್ಕೆ ವಾಪಸ್ಸು ಆಗುವ ಸಾಧ್ಯತೆಯನ್ನು ತಳ್ಳಿ ಹಾಕಿದೆ.


