LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಪ್ರೀತಿಸಿ ಮದ್ವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ

Advertisement

ಶಿವಮೊಗ್ಗ : ಮದುವೆಯ ಸಂಭ್ರಮ ಮಾಸುವ ಮುನ್ನವೇ ವಿಧಿಯ ಕ್ರೂರ ಆಟಕ್ಕೆ ನವದಂಪತಿ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಅಪಘಾತದಲ್ಲಿ ಶರಾವತಿ ನಗರದ ನಿವಾಸಿಗಳಾದ ಜಿ. ಕಿರಣ್ (28) ಮತ್ತು ಅವರ ಪತ್ನಿ ಸೌಮ್ಯ (22) ಮೃತಪಟ್ಟಿದ್ದಾರೆ.

ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅಲ್ಲದೇ ಹೊಸ ಬದುಕಿನ ಕನಸು ಕಂಡಿದ್ದ ನವದಂಪತಿಯ ದುರಂತ ಸಾವು ಎರಡು ಕುಟುಂಬಗಳ ಬದುಕಿನಲ್ಲಿ ಎಂದಿಗೂ ಮರೆಯಲಾಗದ ನೋವನ್ನು ಉಳಿಸಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕಿರಣ್, ಶನಿವಾರ ರಾತ್ರಿ ಪತ್ನಿ ಸೌಮ್ಯ ಅವರೊಂದಿಗೆ ಸ್ಕೂಟಿಯಲ್ಲಿ ಶರಾವತಿ ನಗರದ ಮನೆಯಿಂದ ಗೋವಿಂದಪುರದಲ್ಲಿರುವ ಸೌಮ್ಯ ಅವರ ತವರು ಮನೆಗೆ ತೆರಳುತ್ತಿದ್ದರು. 

ಈ ವೇಳೆ ಸಾಗರ ರಸ್ತೆ ಸಮೀಪದ ರಿಂಗ್ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ದಂಪತಿ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗಳ ತೀವ್ರತೆಯಿಂದಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಂದೊಂದು ಹುದ್ದೆಗೆ ಒಂದೊಂದು ರೇಟ್ : ಕೆಪಿಎಸ್‌ಸಿ ಅಧ್ಯಕ್ಷಕನ ಲಂಚಾವತಾರ ಚಾರ್ಜ್‌ಶೀಟ್ ನಲ್ಲಿ ಉಲ್ಲೇಖ ಪ್ರೀತಿಸಿ ಮದ್ವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣKPSC ಇತಿಹಾಸದಲ್ಲೇ ದಾಖಲೆ ವೇಗ: ಕೇವಲ 5 ದಿನದಲ್ಲಿ KAS ಪೂರ್ವಭಾವಿ ರಿಸಲ್ಟ್ಕ್ರೀಂ ಬಳಸಿ ಎಂದ ಯುಟ್ಯೂಬರ್​ ಮಾತು ನಂಬಿದ ಬಾಲಕಿ ಸಾವಿನಂಚಿನಲ್ಲಿ: ಕಿಡ್ನಿ ಫೇಲ್ಸೂರ್ಯಕುಮಾರ್ ಕಮ್ ಬ್ಯಾಕ್ : ಬಿಸಿಸಿಐ ಮೂಲಗಳ ನಿರಾಕರಣೆ ಕೊನೆಯ ದಿನ 8 ವಿಕೆಟ್ ಪಡೆದರೆ ಭಾರತ ತಂಡಕ್ಕೆ ಗೆಲುವು ಎಂಟು ವರ್ಷಗಳ ಬಳಿಕ ಲಡಾಕ್‌ನಲ್ಲಿ ಚುನಾವಣೆ : ಕೊರೆಯುವ ಚಳಿಯಲ್ಲೂ ಶೇ. 70ಕ್ಕೂ ಮತದಾನ ಕಾರು , ಬೈಕ್, ಕಳುವಾದರೆ ಇನ್ಮುಂದೆ ಠಾಣೆಗೆ ಬರೋದು ಬೇಡ : ಮೊಬೈಲ್‌ನಲ್ಲೇ ದಾಖಲಿಸಿ ಎ-ಎಫ್ ಐಆರ್ ಬ್ಲಿಂಕಿಟ್ ಆಂಬ್ಯುಲೆನ್ಸ್ ಸೇವೆ ಆರಂಭ : ಆಯಪ್ ಮೂಲಕವೇ ಬುಕ್ಕಿಂಗ್ ಅತಿ ಹೆಚ್ಚು ವೇತನ ಪಡೆಯುವ ಮಹಿಳೆಯರ ಪಟ್ಟಿ ಬಿಡುಗಡೆ : 87.50 ಕೋಟಿ ಪಡೆಯೋ ಕೊಡಗಿನ ಕುವರಿ