LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಆಶಾ ಕಾರ್ಯಕರ್ತೆಯರಿಗೆ ಜಪಾನ್‌ʼನಿಂದಲೇ ವಿಡಿಯೋ ಕಾಲ್ ಮಾಡಿದ ಸಿಎಂ 

Advertisement

ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಮನವೊಲಿಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.

 ಜಪಾನ್ ಪ್ರವಾಸದಲ್ಲಿರುವ ಸಿಎಂ ಅಲ್ಲಿಂದಲೇ ವಿಡಿಯೋ ಕಾಲ್ ಮೂಲಕ ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಿ, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. 

ಜಪಾನ್‌ನಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ಟೋಕಿಯೋಗೆ ತೆರಳುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯ ಮೂಲಕ ಆಶಾ ಕಾರ್ಯಕರ್ತೆಯರೊಂದಿಗೆ ಸಿಎಂ ಸಂಪರ್ಕ ಸಾಧಿಸಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಮೇಲೆ ಕೋಪ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ ಅವರು, ಪ್ರತಿಭಟನೆಯನ್ನು ಕೈಬಿಡುವಂತೆ ಕಾರ್ಯಕರ್ತೆಯರಲ್ಲಿ ಕೇಳಿಕೊಂಡಿದ್ದಾರೆ.

"ನಾನು ಹೇಳಿದ ನಂತರವೂ ನನ್ನ ಮಾತು ಕೇಳದೆ ಪ್ರತಿಭಟನೆ ಮುಂದುವರಿಸುತ್ತಿದ್ದೀರಲ್ಲ, ಹೆಣ್ಣುಮಕ್ಕಳಿಗೆಲ್ಲ ತೊಂದರೆಯಾಗುತ್ತಿದೆ" ಎಂದು ಸಿಎಂ ಹೇಳಿದ್ದಾರೆ. ಇದೇ ವೇಳೆ ಆಶಾ ಕಾರ್ಯಕರ್ತೆಯರ ಬಗ್ಗೆ ತನಗೆ ವಿಶೇಷ ಕಾಳಜಿ ಇದೆ ಎಂಬುದನ್ನೂ ಪುನರುಚ್ಚರಿಸಿದ್ದಾರೆ.

ಇನ್ನು ಆಂಗನವಾಡಿ ಕಾರ್ಯಕರ್ತೆಯರು ಕೂಡ ದೆಹಲಿಗೆ ತೆರಳಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದ ಸಿಎಂ, ಈ ಸಂಬಂಧ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.

 

 

 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಶಾ ಕಾರ್ಯಕರ್ತೆಯರಿಗೆ ಜಪಾನ್‌ʼನಿಂದಲೇ ವಿಡಿಯೋ ಕಾಲ್ ಮಾಡಿದ ಸಿಎಂ ಜನವರಿಯಲ್ಲಿ ಜಿಪಂ,ತಾಪಂ ಚುನಾವಣೆ: ಸಚಿವ ಖಂಡ್ರೆ ರಾಜಸ್ಥಾನ ವಿರುದ್ಧ ಗೆದ್ದ ಕರ್ನಾಟಕ ದಿನ ಊಟ ಹಾಕುತ್ತಿದ್ದ ವೃದ್ಧನ ಅಂತ್ಯಕ್ರಿಯೆವರೆಗೆ ಹಿಂಬಾಲಿಸಿದ ಬೀದಿ ನಾಯಿಹೊಲಕ್ಕೆ ನೀರು ಹಾಯಿಸಲು ವೇಳೆ ಆಕಸ್ಮಿಕ ವಿದ್ಯುತ್ ಶಾಕ್ : ಯುವ ರೈತ ಸಾವು ಮೆಟಾ ಬಿಜೆಪಿ ಕಾ ಬೇಟಾ' ಬ್ಯಾನರ್ ಅಭಿಯಾನ : ಮೆಟಾ ಸಂಸ್ಥೆಯ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಸುದ್ದಿ ಬೆನ್ನಲ್ಲೇ ಬಿಚ್ಚು ಬಿದ್ದ ಪೊಲೀಸರು! ಠಾಣೆಯಲ್ಲೇ ಚಾಕು ಇರಿದ ಆರೋಪಿ ಅರೆಸ್ಟ್, ಜೈಲಿಗೆ!ಪಶ್ಚಿಮ ಬಂಗಾಳದ ಹೆಸರು ಬದಲಾವಣೆಗೆ ಸಂಪುಟದ ಅಸ್ತು : ಇನ್ಮುಂದೆ 'ಪಶ್ಚಿಮ ಬಂಗಲಕ್ಷ್ಮೀ ಪೂಜೆ ಹೆಸರಿನಲ್ಲಿ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ : ಕಿಂಗ್‌ಪಿನ್ ಅರೆಸ್ಟ್27 ರಿಂದ ಭಾರತ- ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್ ಪಂದ್ಯ