ಮುಂಬೈ: ಕರ್ನಾಟಕ ಕ್ರಿಕೆಟ್ ತಂಡವು ರಾಜಸ್ತಾನ್ ವಿರುದ್ಧ ಇಂದಿಲ್ಲಿ ನಡೆದ ಸೈಯದ ಮುಸ್ತಾಕ್ ಅಲಿ ರಾಷ್ಟ್ರೀಯ ಟಿ-20 ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ 4 ವಿಕೆಟ್ ಗಳ ಸುಲಭ ಗೆಲುವು ಪಡೆಯಿತು.
ಕರ್ನಾಟಕ ಈ ಗೆಲುವಿನೊಂದಿಗೆ 6 ಪಂದ್ಯ ಗಳಿಂದ 12 ಅಂಕಗಳಿಸಿ ಪಾಯಿಂಟ್ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ.
ಕರ್ನಾಟಕ ಕೊನೆಯ ಲೀಗ್ ಪಂದ್ಯದಲ್ಲಿ ಬರೋಡಾ ತಂಡವನ್ನು ಎದುರಿಸಲಿದ್ದು, ಆ ಪಂದ್ಯದಲ್ಲಿ ಸಾಧ್ಯವಾದಷ್ಟು ಉತ್ತಮ ರನ್ ಸರಾಸರಿಯಿಂದ ಗೆದ್ದು ಮುಂದಿನ ಹಂತ ಪ್ರವೀಶಿಸಲು ಉಳಿದ ಪಂದ್ಯಗಳ ಫಲಿತಾಂಶ ಹಾಗೂ ರನ್ ಸರಾಸರಿ ಮೇಲೆ ಕರ್ನಾಟಕದ ಭವಿಷ್ಯ ಅಡಗಿದೆ.


