ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡದಲ್ಲಿ ಸ್ಪೆಷಲಿಸ್ಟ ಸ್ಪಿನ್ ಬೌಲರ್ ಗಳನ್ನು ಆಡಿಸದಿರುವ ಟೀಮ್ ಮ್ಯಾನೇಜ್ ಮೇಂಟ್ ನಿರ್ಧಾರವನ್ನು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕಟು ವಾಗಿ ಟೀಕಿಸಿದ್ದಾರೆ.
ಹೊರ ದೇಶಗಳಲ್ಲಿ ನಡೆಯುವ ಸರಣಿಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾದರೇ ಸ್ಪೀನ್ನರುಗಳ ಪಾತ್ರ ಮುಖ್ಯವಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.
ಗುಣ ಮಟ್ಟದ ಸ್ಪೀನ್ನರುಗಳಿಗೆ ದೊಡ್ಡ ಸ್ಪೆಲ್ ಬೌಲಿಂಗ್ ನೀಡುವುದರಿಂದ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೇರಲು ಸಾಧ್ಯ ಎಂದು ಭಾರತದ ಮಾಜಿ ನಾಯಕ ಹೇಳಿದರು.


