ನವಲಗುಂದ : "ಕನ್ನಡ ನಾಡು, ನುಡಿ ಹಾಗೂ ಕಲೆಯ ಬೆಳವಣಿಗೆಗಾಗಿ ಧಾರವಾಡ ಕರೋಕೆ ಸಂಸ್ಥೆಯು ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ" ಎಂದು ಧರ್ಮೇಂದ್ರ ಮುರಾರಿ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 'ಧಾರವಾಡ ಕರೋಕೆ' ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 8ನೇ ಆವೃತ್ತಿಯ 'ಕನ್ನಡ ಗಾನ ಕೌಸ್ತುಭ' ಕನ್ನಡ ಗೀತೆಗಳ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಮಾತನಾಡಿ, "ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರೋಕೆ ಸಂಸ್ಥೆಯು ಹಮ್ಮಿಕೊಂಡಿರುವ ಇಂತಹ ಗಾಯನ ಸ್ಪರ್ಧೆಗಳು ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವುದರ ಜೊತೆಗೆ,t ಸಂಗೀತ ಕ್ಷೇತ್ರಕ್ಕೆ ನೀಡುತ್ತಿರುವ ದೊಡ್ಡ ಕೊಡುಗೆಯಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಬುಸಾಬ ಯರಗುಪ್ಪಿ ಅವರು ಧಾರವಾಡ ಕರೋಕೆ ಸಂಸ್ಥೆಯ ಅಧ್ಯಕ್ಷ ಮೈನುದ್ದಿನ ಕಿರವಾಡಿ ಹಾಗೂ ಧರ್ಮೇಂದ್ರ ಮುರಾರಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಗಂಗಾಧರ ಕತ್ತಿ, ಶ್ವೇತಾ ಕಿರವಾಡಿ, ಹನುಮಂತ, ಭಾವನಾ ಮುರಾರಿ, ವಿನೋದ ಲಮಾಣಿ, ಜ್ಯೋತಿ, ಅಮಿತ್ ಸುಬೆದಾರ, ಅಕ್ಬರ ಮುಲ್ಲಾ ಸೇರಿದಂತೆ ಹಲವು ಸ್ಪರ್ಧಿಗಳು ಉಪಸ್ಥಿತರಿದ್ದರು.
ವರದಿ : ಗುರುರಾಜ ಹಂಚಾಟೆ


