LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

800 ಜನರ ಪ್ರಾಣ ತೆಗೆದ ಪ್ರಧಾನಿ ಮೋದಿ : ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ

Advertisement

ಬೆಂಗಳೂರು: ನಿನ್ನೆಯಿಂದ ಪ್ರಾರಂಭವಾಗಿರುವ ವಿಧಾನ ಪರಿಷತ್‌ ಅಧಿವೇಶನದಲ್ಲಿ ಇಂದು ಕೂಡಾ ಉಭಯ ಪಕ್ಷಗಳ ನಾಯಕರ ನಡುವೆ ಗದ್ದಲ ಏರ್ಪಟ್ಟಿದೆ. 

ಮುಖ್ಯವಾಗಿ ಕಸ್ತೂರಿ ರಂಗನ್‌ ವರದಿ ಕುರಿತಂತೆ ಪರ ವಿರೋಧ ಚರ್ಚೆಗಳು ತೀವ್ರವಾಗಿದ್ದು, ಇದೇ ಸಂದರ್ಭ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನ ಪರಿಷತ್‌ ಅಧಿವೇಶದ ಸಂದರ್ಭ ಏರ್ಪಟ್ಟ ಗದ್ದಲದ ನಡುವೆ ಎದ್ದು ನಿಂತು ಆಕ್ರೋಶ ಹೊರ ಹಾಕಿದ ಬಿ.ಕೆ ಹರಿಪ್ರಸಾದ್, ನಾನು ಈಗಲೂ ಹೇಳುವೆ, ಪ್ರಧಾನಿ ನರೇಂದ್ರ ಮೋದಿ ಅವರು 800 ರೈತರ ಕೊಲೆ ಮಾಡಿದ್ದಾರೆ. ಅವರಿಂದಾಗಿ ದೇಶಾದ್ಯಂತ 800 ಅನ್ನದಾತರ ಕೊಲೆ ಆಗಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ಇದೇ ವೇಳೆ ಸದನದ ಗದ್ದಲವನ್ನು ತಣ್ಣಗಾಗಿಸಲು ಸ್ಪೀಕರ್ ಸಲೀಂ ಅಹಮದ್ ಎದ್ದುನಿಂತು ಎಲ್ಲರನ್ನು ಶಾಂತರಾಗುವಂತೆ ಮನವಿ ಮಾಡಿಕೊಂಡಿದ್ದಾರೆ. ಸಭಿಕರ ಗದ್ದಲ ಹೆಚ್ಚಾದಂತೆ ಗುಡುಗಿದ ಸ್ಪೀಕರ್‌, ಸದನದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಸ್ವಲ್ಪ ಸೆನ್ಸ್‌ ಇರಬೇಕು.

ನಾನು ನಿಂತುಕೊಂಡು ಮಾತನಾಡುತ್ತಿದ್ದೇನೆ ಎಂದರೆ ನೀವೆಲ್ಲರೂ ಶಾಂತರಾಗಿ ಕುಳಿತುಕೊಳ್ಳಬೇಕು. ಒಬ್ಬೊಬ್ಬರಾಗಿ ಮಾತನಾಡಲು ಎಲ್ಲರಿಗೂ ಅವಕಾಶ ನೀಡುತ್ತೇವೆ. ಇದೇನು ಫಿಶ್‌ ಮಾರ್ಕೆಟ್‌ ಅಲ್ಲ ಎಂದು ಗದರಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೋಲು ಮತ್ತು ಗೆಲವುಗಳನ್ನು ಸಮಾನವಾಗಿ ಕಾಣಬೇಕು: ಭೀಮರಾಯ ಬಿ ರಾಮಸಮುದ್ರಅತಿಥಿ ಉಪನ್ಯಾಸಕರ ಸಂಘಕ್ಕೆ ಅಧ್ಯಕ್ಷರಾಗಿ ಡಾ. ಬಸವರಾಜ್ ಸುಂಕೇಶ್ವರ್ ಪ್ರಧಾನ ಕಾರ್ಯದರ್ಶಿಗಳಾಗಿ ಡಾ. ಬಸವರಾಜ್ ಕರಡಿಗುಡ್ಡ  ಆಯ್ಕೆ ಪ್ರಜಾಸೇವಾ ಆಂದೋಲನ'ದಲ್ಲಿ ಶಿವಲಿಂಗೇಗೌಡ ಹೇಳಿಕೆ ವಿವಾದ : ಬಿಜೆಪಿ ಅಂಚೆ ಚೀಟಿ ಲೇವಡಿಲೋಕಾಯುಕ್ತ ದಾಳಿ: ಹಾಸ್ಟೆಲ್ ನಿವೃತ್ತ ನೌಕರನ ಬಳಿ 2.71 ಕೋಟಿ ರೂ. ಆಸ್ತಿ ಪತ್ತೆ800 ಜನರ ಪ್ರಾಣ ತೆಗೆದ ಪ್ರಧಾನಿ ಮೋದಿ : ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪಸೆ. 24 ರಂದು ದ. ಅಪ್ರಿಕಾ- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ಸೆ. 24 ರಂದು ದ. ಅಪ್ರಿಕಾ- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ಜಪಾನ್ ವಿರುದ್ಧ ಸ್ವಲ್ಪದರಲ್ಲೇ ಸೋಲಿನಿಂದ ಪಾರಾದ ಭಾರತ ತಂಡ KPSC' ರದ್ದುಗೊಳಿಸುವ ಬಗ್ಗೆ ಗಂಭೀರ ಚಿಂತನೆ : ಡಿ.ಕೆ. ಶಿವಕುಮಾರ್ 'ಸಿಮ್‌ ಕಾರ್ಡ್' ಬೇರೆಯವರಿಗೆ ಕೊಡಿಸಿದ್ರೆ ಮೂರು ವರ್ಷ ಜೈಲು, 50 ಲಕ್ಷ ದಂಡ ಫಿಕ್ಸ್