LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬಾಳೆಗೊನೆಯಲ್ಲಿ ಡ್ರಗ್ಸ್ ಸಾಗಾಟ: ಯುವ ರೈತನ ಕರಾಳ ಮುಖ ಬಯಲು

Advertisement

ಮೈಸೂರು : ಕೇರಳದಲ್ಲಿ ಪ್ರಗತಿಪರ ಯುವ ರೈತ ಎಂದು ಪ್ರಶಸ್ತಿ ಪಡೆದು, ನೂರಾರು ಯುವಕರಿಗೆ ಕೃಷಿ ಸ್ಪೂರ್ತಿಯಾಗಿದ್ದ 31 ವರ್ಷದ ಧನೇಶ್ ಎಸ್. ನಾಯರ್ ಅಲಿಯಾಸ್ ಡ್ಯಾನಿ ಎಂಬಾತ ಇದೀಗ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಡ್ರಗ್ಸ್ ಪೆಡ್ಲರ್ ಆಗಿ ಸಿಕ್ಕಿಬಿದ್ದಿದ್ದಾನೆ.

ಈತನ ಬಂಧನದಿಂದ ಮೈಸೂರಿನಲ್ಲಿ ಡ್ರಗ್ಸ್ ಜಾಲದ ಮತ್ತೊಂದು ಮುಖ ಬಯಲಾಗಿದೆ. ನಂಜನಗೂಡಿನ ಕುರಿಹುಂಡಿ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದಿದ್ದ ಧನೇಶ್ ಬಾಳೆ ಗಿಡ ಬೆಳೆದಿದ್ದ. ಇದೇ ಬಾಳೆ ಗೊನೆಗಳಲ್ಲಿ ಡ್ರಗ್ಸ್ ಅಡಗಿಸಿ ಸಾಗಾಟ ಮಾಡುತ್ತಿದ್ದ. ಕೇರಳ ಪೊಲೀಸರು ಕಾರ್ಯಾಚರಣೆ ನಡೆಸಿ 720 ಗ್ರಾಂ ಎಂಡಿಎಂಎ ಹಾಗೂ 800 ಎಂಎಲ್ ಹ್ಯಾಶ್ ಆಯಿಲ್ ವಶಪಡಿಸಿಕೊಂಡಿದ್ದು, ವಿಡಿಯೋವನ್ನು ಕೇರಳ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ರೈತರು ಅಪರಿಚಿತರಿಗೆ ಜಮೀನು ಗುತ್ತಿಗೆ ನೀಡುವ ಮುನ್ನ ಎಚ್ಚರಿಕೆ ವಹಿಸುವಂತೆ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ ಮನವಿ ಮಾಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ಕೋಟಿ ರೂ ಸಂಬಳದ ಕೆಲಸ ಗಿಟ್ಟಿಸಿಕೊಂಡ ಕಾರ್ಮಿಕನ ಮಗ ಡಿಕೆ ಶಿವಕುಮಾರ್ ನೂತನ ಗೃಹಪ್ರವೇಶ :  ಕಾರ್ಮಿಕರ ಜೊತೆ ಊಟ ಸವಿದ ಸಿಎಂಸಿಎಂ ಸೇರಿದಂತೆ ಪ್ರತಿಯೊಬ್ಬರ ಫೋನ್‌ಗಳೂ ಕದ್ದಾಲಿಕೆ ಆಗುತ್ತವೆ : ಪ್ರಿಯಾಂಕ್ ಖರ್ಗೆ16 ದಿನವಾದರೂ ಕರಗದ ಧಾರವಾಡದ ಆಂಜನೇಯನ ಬೆಣ್ಣೆ ಅಲಂಕಾರನಾಳೆಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ ಪಾಕಿಸ್ತಾನ- ಶ್ರೀಲಂಕಾ ದ್ವಿತೀಯ ಟೆಸ್ಟ್ ನಾಳೆಯಿಂದ ಆರಂಭಉತ್ತರ ಪ್ರದೇಶ್ ವಿರುದ್ಧ ಕರ್ನಾಟಕಕ್ಕೆ 16 ರನ್ ಗಳ ಸೋಲುಸ್ಮಶಾನದಲ್ಲಿ ದಲಿತ ಸಮುದಾಯದವರ ಫೋಟೋಗೆ ಕಪ್ಪು ಗೊಂಬೆ ಕಟ್ಟಿ ವಾಮಾಚಾರ ರೈಲ್ವೆ ರಿಕ್ರೂಟ್‌ ಮೆಂಟ್‌ ಬೋರ್ಡ್‌ ನಿಂದ 191 ಹುದ್ದೆಗಳಿಗೆ ಅರ್ಜಿ ಆಹ್ವಾನ ನವೆಂಬರ್ 20, 21 ರಂದು ಹಾಲಪ್ಪ ಪ್ರತಿಷ್ಠಾನದಿಂದ ಯುವಜನರಿಗಾಗಿ ತುಮಕೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ