LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ನಾಳೆಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ 

Advertisement

ತಿರುವನಂತಪುರಂ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ವಾರ್ಷಿಕ ಮಂಡಲಕಾಲ-ಮಕರವಿಳಕ್ಕು  ತೀರ್ಥಯಾತ್ರೆಗೆ ಕಾಲ ಕೂಡಿಬಂದಿದ್ದು, ಸೋಮವಾರದಿಂದ (ನ. 17) ಅಧಿಕೃತವಾಗಿ ಭಕ್ತರ ದರ್ಶನ ಆರಂಭವಾಗಲಿದ್ದು, ಭಕ್ತರಿಗೆ ಸುಗಮ ಸಂಚಾರ ಹಾಗೂ ನೂಕುನುಗ್ಗಲು ತಡೆಯಲು ಈ ಬಾರಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಇಂದಿನಿಂದಲೇ ದೇಗುಲದ ಬಾಗಿಲು ಮುಕ್ತ

ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಇಂದು (ನ.16) ಸಂಜೆ 5 ಗಂಟೆಗೆ ಗರ್ಭಗುಡಿಯ ದ್ವಾರ ತೆರೆಯಲಿದ್ದು, ನಾಳೆಯಿಂದ ಭಕ್ತರಿಗೆ ಗರ್ಭಗುಡಿ ಪ್ರವೇಶಕ್ಕೆ ಸಂಪೂರ್ಣ ಅವಕಾಶ ಕಲ್ಪಿಸಲಾಗಿದೆ. 

ಉದ್ಘಾಟನಾ ದಿನದ ದರ್ಶನಕ್ಕಾಗಿ ಈಗಾಗಲೇ ಸುಮಾರು 30,000ಕ್ಕೂ ಅಧಿಕ ಮಂದಿ ಮುಂಗಡ ಸ್ಲಾಟ್ ಕಾಯ್ದಿರಿಸಿಕೊಂಡಿದ್ದಾರೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿನಿತ್ಯ ಎಷ್ಟು ಜನರಿಗೆ ದರ್ಶನ

ಯಾತ್ರಾರ್ಥಿಗಳ ನಿರ್ವಹಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ ದಿನಕ್ಕೆ ಕೇವಲ 80,000 ಭಕ್ತರಿಗೆ ಮಾತ್ರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. 

ಇದರಲ್ಲಿ ವರ್ಚುವಲ್ ಕ್ಯೂ ಪದ್ಧತಿ ಮೂಲಕ 60,000 ಸ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದ್ದು, ನಿಲಕ್ಕಲ್‌ನಲ್ಲಿ ಸ್ಪಾಟ್ ಬುಕಿಂಗ್‌ಗಾಗಿ 10,000 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.

ಎರುಮೇಲಿ ಮತ್ತು ಪುಲ್ಲುಮೇಡು ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ಕ್ರಮವಾಗಿ ತಲಾ 3,000 ಹಾಗೂ ವಂಡಿಪೆರಿಯಾರ್‌ನ ಸತ್‌ರಾಮ್ ಮಾರ್ಗದ ಮೂಲಕ 2,000 ಸೀಮಿತ ಕೋಟಾ ಲಭ್ಯವಿರುತ್ತದೆ.

 ಈ ಎಲ್ಲಾ ಮಾರ್ಗಗಳಿಗೂ ಮುಂಚಿತವಾಗಿ ಆನ್‌ಲೈನ್ ಬುಕಿಂಗ್ ಕಡ್ಡಾಯವಾಗಿದ್ದು, ಪಂಬಾದಲ್ಲಿ ಯಾವುದೇ ಸ್ಪಾಟ್ ಬುಕಿಂಗ್ ಸೌಲಭ್ಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ಕೋಟಿ ರೂ ಸಂಬಳದ ಕೆಲಸ ಗಿಟ್ಟಿಸಿಕೊಂಡ ಕಾರ್ಮಿಕನ ಮಗ ಡಿಕೆ ಶಿವಕುಮಾರ್ ನೂತನ ಗೃಹಪ್ರವೇಶ :  ಕಾರ್ಮಿಕರ ಜೊತೆ ಊಟ ಸವಿದ ಸಿಎಂಸಿಎಂ ಸೇರಿದಂತೆ ಪ್ರತಿಯೊಬ್ಬರ ಫೋನ್‌ಗಳೂ ಕದ್ದಾಲಿಕೆ ಆಗುತ್ತವೆ : ಪ್ರಿಯಾಂಕ್ ಖರ್ಗೆ16 ದಿನವಾದರೂ ಕರಗದ ಧಾರವಾಡದ ಆಂಜನೇಯನ ಬೆಣ್ಣೆ ಅಲಂಕಾರನಾಳೆಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ ಪಾಕಿಸ್ತಾನ- ಶ್ರೀಲಂಕಾ ದ್ವಿತೀಯ ಟೆಸ್ಟ್ ನಾಳೆಯಿಂದ ಆರಂಭಉತ್ತರ ಪ್ರದೇಶ್ ವಿರುದ್ಧ ಕರ್ನಾಟಕಕ್ಕೆ 16 ರನ್ ಗಳ ಸೋಲುಸ್ಮಶಾನದಲ್ಲಿ ದಲಿತ ಸಮುದಾಯದವರ ಫೋಟೋಗೆ ಕಪ್ಪು ಗೊಂಬೆ ಕಟ್ಟಿ ವಾಮಾಚಾರ ರೈಲ್ವೆ ರಿಕ್ರೂಟ್‌ ಮೆಂಟ್‌ ಬೋರ್ಡ್‌ ನಿಂದ 191 ಹುದ್ದೆಗಳಿಗೆ ಅರ್ಜಿ ಆಹ್ವಾನ ನವೆಂಬರ್ 20, 21 ರಂದು ಹಾಲಪ್ಪ ಪ್ರತಿಷ್ಠಾನದಿಂದ ಯುವಜನರಿಗಾಗಿ ತುಮಕೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ