ಬೆಂಗಳೂರು : ಡಿ. ಕೆ ಶಿವಕುಮಾರ್ ಅವರ ಅಧಿಕೃತ ಸರ್ಕಾರಿ ನಿವಾಸದ ಗೃಹ ಪ್ರವೇಶ ನಡೆದಿದೆ. ನೂತನ ಮನೆಗೆ ಗಂಗಾ ಎಂದು ಹೆಸರಿಡಲಾಗಿದೆ.
ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವುಕುಮಾರ್ ಸರ್ಕಾರಿ ನಿವಾಸದ ಗೃಹ ಪ್ರವೇಶ ನಡೆದಿದೆ. ಮುಖ್ಯಮಂತ್ರಿಗ ಅಧಿಕೃತ ಸರ್ಕಾರಿ ನಿವಾಸಕ್ಕೆ ಗಂಗಾ ಎಂದು ಹೆಸರಿಡಲಾಗಿದೆ.
ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ನವೀಕರಣ ಮಾಡಿ ಇದೀಗ ಗೃಹ ಪ್ರವೇಶ ನಡೆದಿದೆ. ನದಿಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಹಾಗೂ ಗೌರವವಿದೆ.
ಹೀಗಾಗಿ ಗಂಗಾ ಎಂದು ಹೆಸರಿಡಲಾಗಿದೆ. ಇನ್ನು ಪ್ರತಿ ಕೊಠಡಿಗೆ ರಾಜ್ಯದ ನದಿಗಳ ಹೆಸರು ಇಡಲಾಗಿದೆ. ಕಬಿನಿ, ಹೇಮಾವತಿ, ಶಿಂಷಾ ಹಾಗೂ ತುಂಗಭದ್ರಾ ನದಿಗಳ ಹೆಸರು ಪ್ರತಿ ಕೊಠಡಿಗೆ ಇಡಲಾಗಿದೆ.ಗೃಹ ಪ್ರವೇಶದಲ್ಲಿ ಹಲವು ವಿಚಾರಗಳು ಗಮನಸೆಳೆದಿದೆ.
ನೂತನ ಮನೆ ಗೃಹಪ್ರವೇಶ ಪೂಜೆ ವೇಳೆ ಅಜ್ಜಯ್ಯನ ಪೋಟೋಗೂ ಪೂಜೆ ಸಲ್ಲಿಕೆ ಮಾಡಲಾಗಿದೆ. ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ವಾಸ್ತವ್ಯ ಹೂಡಿದ್ದ ಈ ಕಟ್ಟಡದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ನವೀಕರಣ ಮಾಡಲಾದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು, ಸ್ವೀಕರಿಸುವ ದಾಖಲೆಗಳನ್ನು ನಿರ್ವಹಿಸಲು ಹಾಗೂ ಸಭೆ-ಸಮಾರಂಭಗಳ ಆಯೋಜನೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ನಿಮಗಾಗಿ, ನಿಮ್ಮ ಸೇವೆಗಾಗಿ ʻಗಂಗಾʼ ಬಾಗಿಲು ಸದಾ ತೆರದಿರುತ್ತದೆ ಎಂದಿದ್ದಾರೆ.


