LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಅಂದಿನ ಸೋಲೇ ಎರಡು ಬಾರಿ ಸಿಎಂ ಆಗಲು ದಾರಿಯಾಯಿತು: ಸಿದ್ದರಾಮಯ್ಯ

Advertisement

ಬೆಂಗಳೂರು: "1991ರ ಲೋಕಸಭಾ ಚುನಾವಣೆಯಲ್ಲಿ ನಾನು ಕೊಪ್ಪಳದಿಂದ ಸ್ಪರ್ಧಿಸಿ ಸೋತಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು.

 ಆ ಚುನಾವಣೆಯಲ್ಲಿ ನಾನು ಗೆದ್ದಿದ್ದರೆ ಸಂಸದನಾಗಿ ದೆಹಲಿಗೆ ಹೋಗುತ್ತಿದ್ದೆ, ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಪಯಣ ಹಾಗೂ ಮಹತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆಯ ಹಿಂದಿನ ಬಾಲ್ಯದ ನೋವಿನ ನೆನಪುಗಳನ್ನು ಹಂಚಿಕೊಂಡರು.

ಸೋತಿದ್ದು ಒಳ್ಳೇದಾಯ್ತು:

"1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ನಾನು ಚುನಾವಣೆಗೆ ನಿಂತಿದ್ದೆ. ಆ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರು ಹತ್ಯೆಯಾದ ಕಾರಣ ಅನುಕಂಪದ ಅಲೆಯಲ್ಲಿ ನಾನು ಸೋಲಬೇಕಾಯಿತು. 

ಆದರೆ ಆ ಸೋಲು ನನ್ನ ಪಾಲಿಗೆ ವರವಾಯಿತು. ಒಂದು ವೇಳೆ ಅಂದು ಗೆದ್ದಿದ್ದರೆ ದೆಹಲಿ ರಾಜಕಾರಣಕ್ಕೆ ಸೀಮಿತವಾಗಿ ಎಂ.ಪಿ ಆಗಿರುತ್ತಿದ್ದೆ. ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ಬಾರಿ ಜನರ ಸೇವೆ ಮಾಡುವ ಅವಕಾಶ ಸಿಗುತ್ತಿರಲಿಲ್ಲ" ಎಂದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ ಒಂದೇ ತಿಂಗಳಲ್ಲಿ 8 ಕೋಟಿ ಮೌಲ್ಯದ ಅನ್ನಭಾಗ್ಯ ಅಕ್ಕಿ ಸೀಜ್‌: 266 ಮಂದಿ ಅರೆಸ್ಟ್ಲೇಡಿಸ್ ಹಾಸ್ಟೆಲ್​​​​​​​​​​​​​​​​​​​​​​​​​​​​​​​​​​​​​ ಈತನ ಟಾರ್ಗೆಟ್: ವಿದ್ಯಾರ್ಥಿನಿಯರ ಮುಂದೆ ಅಸಭ್ಯ ವರ್ತನೆಬೆಳಗಾವಿಯಲ್ಲಿ ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು ಅಂದಿನ ಸೋಲೇ ಎರಡು ಬಾರಿ ಸಿಎಂ ಆಗಲು ದಾರಿಯಾಯಿತು: ಸಿದ್ದರಾಮಯ್ಯಕಿವೀಸ್ ವಿರುದ್ಧ 3-1 ರಿಂದ ಏಕದಿನ ಸರಣಿ ಗೆದ್ದ ಭಾರತ ಫುಲ್ ಶರ್ಟ್ ಗೆ ಕತ್ತರಿ ಹಾಕಲು ಒಪ್ಪದೇ, ಬನಿಯನ್ ನಲ್ಲಿ KAS ಪರೀಕ್ಷೆ ಬರೆದ ಅಭ್ಯರ್ಥಿಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಯಶ್‌ ʻರಾಮಾಯಣʼ: 12 ದಿನಗಳಲ್ಲಿ ₹1,228 ಕೋಟಿ ಗಳಿಕೆಕರ್ನಾಟಕ- ಉತ್ತರ ಪ್ರದೇಶ ಪಂದ್ಯ ನಾಳೆ ಉನ್ನತ ಹುದ್ದೆ ಹತ್ತಿರಕ್ಕೆ ಬಂದು ಕೈತಪ್ಪಿದೆ : ಮತ್ತೆ ಬೇಸರ ಹೊರಹಾಕಿದ ಡಾ. ಜಿ. ಪರಮೇಶ್ವರ್ಇಸ್ರೇಲ್ ಮೇಲಿನ ದಾಳಿ ರೂಪಿಸಿದ್ದ ಹಮಾಸ್‌ನ ಹಿರಿಯ ಕಮಾಂಡರ್ ಹತ್ಯೆ