Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೌಟುಂಬಿಕ ಕಲಹ ತಾರಕಕ್ಕೇರಿ,ಪತ್ನಿ ಮಗುವನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದ ಗಂಡ

Advertisement

ಬಳ್ಳಾರಿ: ಕೌಟುಂಬಿಕ ಕಲಹ ತಾರಕಕ್ಕೇರಿ, ಪತಿಯೊಬ್ಬ ತನ್ನ ಪತ್ನಿ ಹಾಗೂ ಹೆತ್ತ ಏಳು ತಿಂಗಳ ಹೆಣ್ಣು ಮಗುವನ್ನು ಅತ್ಯಂತ ಭೀಕರವಾಗಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ನಗರದ ಅಂದ್ರಾಳ್ ಪ್ರದೇಶದಲ್ಲಿ ನಡೆದಿದೆ.

ಕೊಲೆಯಾದ ದುರ್ದೈವಿಗಳನ್ನು ರಾಜೇಶ್ವರಿ ಹಾಗೂ ಆಕೆಯ 7 ತಿಂಗಳ ಕಂದಮ್ಮ ಅಶ್ವಿನಿ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಅಂದ್ರಾಳ್ ಪ್ರದೇಶದ ಮನೆಯಲ್ಲಿ ದಂಪತಿ ನಡುವೆ ತೀವ್ರ ಸ್ವರೂಪದ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಪತಿ ಹೊನ್ನೂರಸ್ವಾಮಿ, ಮನೆಯಲ್ಲಿದ್ದ ಸುತ್ತಿಗೆಯಿಂದ ಪತ್ನಿ ರಾಜೇಶ್ವರಿ ಹಾಗೂ ಕಂದಮ್ಮ ಅಶ್ವಿನಿ ತಲೆಗೆ ಹೊಡೆದಿದ್ದಾನೆ. ಪೆಟ್ಟು ತೀವ್ರವಾಗಿದ್ದರಿಂದ ತಾಯಿ-ಮಗು ಇಬ್ಬರೂ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ದುಷ್ಕೃತ್ಯ ಎಸಗಿದ ಬಳಿಕ ಆರೋಪಿ ಹೊನ್ನೂರಸ್ವಾಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಪಾಪಿ ಪತಿ ಹೊನ್ನೂರಸ್ವಾಮಿಗಾಗಿ ಜಾಲ ಬೀಸಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ತಿದಾಳೆಂದು ಆಸ್ಪತ್ರೆಯಿಂದ ಮನೆಗೆ ತರುವಾಗ ರಸ್ತೆ ಮಧ್ಯೆ ಎದ್ದು ಕುಳಿತ ಮಹಿಳೆವಿನಯ್ ಕುಲಕರ್ಣಿ ಸೇರಿದಂತೆ 10 ಆರೋಪಿಗಳಿಗೆ ಜಾಮೀನು ಮಂಜೂರು ರಾಜ್ಯ ಹೆದ್ದಾರಿಯ ರೈತರ ಜಮೀನಿಗೆ ನಿಗದಿತ ರೇಟ್ ಫಿಕ್ಸ್ ಹಸಿರು ಸೇನೆ ರೈತರ ಚಿಕ್ಕೋಡಿಯಲ್ಲಿ ಬೃಹತ್ ಹೋರಾಟಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಫುಡ್ ಪಾಯಿಜನ್ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ನಿಲಯ ವಿದ್ಯಾರ್ಥಿನಿಯರು ಅಸ್ತವ್ಯಸ್ತಹುಮನಾಬಾದನಲ್ಲಿ ಇಂದು ಪತ್ರಿಕಾ ದಿನಾಚರಣೆ ಶಿಕ್ಷೆಯಿಲ್ಲದೆ ಶಿಕ್ಷಣ ಸಾಧ್ಯವಿಲ್ಲ : ಧರ್ಮವ್ರತಾನಂದಜಿ ಮಹಾರಾಜ್ ಪೇಪರ್ ಲೀಕ್ ಕೋರರನ್ನು ಬಿಡುವ ಮಾತೇ ಇಲ್ಲ : ಮೋದಿ ಮತ್ತೊಂದು ವಿಡಿಯೋ 7,000 ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಪಾಸಿಟಿವ್ ಸುದ್ದಿ ತಪ್ಪು ಹಾಗೂ ಆಧಾರರಹಿತ : ಆರೋಗ್ಯ ಇಲಾಖೆ ಮೋದಿ ವಿಷ್ಣುವಿನ ಅವತಾರ ಅವರ ಕಾಲು ತೊಳೆದು ನೀರು ಕುಡಿಯಲು ಸಿದ್ಧ : ಬಾಲಿವುಡ್ ನಟ ಬೆರಿ