
ಇದೇ ಸಂದರ್ಭದಲ್ಲಿ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷರಾದ ಬಾಲಾಜಿ ಜಬಾಡೆ ಮಾತನಾಡಿ ದೀನ, ದಲಿತ, ಬಡವರಿಗೆ, ರೈತಾಪಿ ವರ್ಗದವರಿಗೆ, ಹಿಂದುಳಿದ, ಅಲ್ಪಸಂಖ್ಯಾತರ ಏಳಿಗೆಗಾಗಿ ಶ್ರಮಿಸುತ್ತಿರುವುದು ಅಷ್ಟೇ ಅಲ್ಲದೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಮ್ಮ ಅಣ್ಣವರಾದ ಭೈರತಿ ಸುರೇಶ್ ಅವರ ಹುಟ್ಟು ಹಬ್ಬದ ನಿಮಿತ್ಯ. ಇಂದು ಅತಿ ಸರಳ ರೀತಿಯಲ್ಲಿ ಭಾಲ್ಕಿ ಪಟ್ಟಣದಲ್ಲಿ ಆಚರಿಸಿದ್ದೇವೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಮಾಳಸಾಕಾಂತ್ ವಾಗೇ, ಸಂತೋಷ್ ಸಿರಿಕಾರ್, ಅನಿಲ್ ಸಾಹುಕಾರ್, ಮಾತನಾಡಿದರು. ದೇವಿದಾಸ್ ಲಂಜವಾಡೆ, ಯೋಗೇಶ್ ಬೆಳಕೆರೆ, ಸೋಹಿಲ್, ದತ್ತಾತ್ರಿ, ಶಂಕರ್, ಆದಿತ್ಯ ಮೇದ್ರೆ ಲೋಕೇಶ್ ಊಚ್ಚ ಇನ್ನಿತರು ಈ ಸಂದರ್ಭದಲ್ಲಿ ಉಪಸಿದ್ಧರಿದ್ದರು.
ವರದಿ:ಸಂತೋಷ ಬಿಜಿ ಪಾಟೀಲ

