ಸೇಡಂ: ತಾಲೂಕಿನ ಸಿಲಾರಕೋಟ ಗ್ರಾಮದಲ್ಲಿ ನಿರ್ಮತಿ ಕೇಂದ್ರದ ಅನುದಾನಾಡಿಯಲ್ಲಿ ನಿರ್ಮಾಣವಾಗುತ್ತಿರುವ ಹಣದಿ ರಸ್ತೆಯನ್ನು ಸಂಪೂರ್ಣ ಕಳಪೆಮಟ್ಟದಲ್ಲಿ ಮಾಡುತ್ತಿದ್ದು ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಉಷಪ್ಪ ಗೌಡ ಕಲಾಲ್ ಅವರು ರೈತರ ಪರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದೆ ಇದೇ ಊರಿನಲ್ಲಿ ಶ್ರೀರಾಮ ಮಂದಿರ ಹತ್ತಿರ ಹಣದಿ ರಸ್ತೆಯು ಯಾವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂಬುದನ್ನು ವೀಕ್ಷಣೆ ಮಾಡಲಿ ತದನಂತರ ಇದರ ಕೆಲಸ ಮುಂದುವರೆಯಲಿ ಎಂದು ಹೇಳಿದರು. ರಸ್ತೆ ನಿರ್ಮಾಣಕ್ಕೆ ಸುಮಾರು 35ಲಕ್ಷ ಬಡ್ಜೆಟ್ ಶಾಸಕರು ನೀಡಿರುತ್ತಾರೆ ಆದರೆ ಇಲ್ಲಿ ಸುಮಾರು 10ಲಕ್ಷ ರೂಪಾಯಿ ಕೆಲಸ ಕೂಡ ಮಾಡಿರುವುದಿಲ್ಲ ಹಾಗೆ ರೈತರು ಕೇಳಲು ಬಂದರೆ ಊರಿನ ಗೌಡರ ಜೊತೆ ಮಾತನಾಡಿ ಎಂದು ಹೇಳುತ್ತಿದ್ದಾರೆ. ಇದು ಯಾವ ಲೆಕ್ಕ ಎಂಬುದು ನಮಗೆ ತಿಳಿಯುತ್ತಿಲ್ಲ.
ನಮ್ಮ ಹೊಲಗಳಿಗೆ ಹೋಗಲು ರಸ್ತೆ ತೊಂದರೆ ಆಗುತ್ತಿರುವ ಕುರಿತು ಶಾಸಕರ ಗಮನಕ್ಕೆ ತಂದಿದ್ದೇವೆ ಶಾಸಕರು ಅನುಧಾನ ನೀಡಿದ್ದಾರೆ ಆದರೆ ಗುತ್ತಿಗೆದಾರ ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡದೇ ಸುಣ್ಣಬಣ್ಣ ಎಂಬಂತೆ ಕೆಲಸ ಮಾಡುತ್ತಿದ್ದಾರೆ ಈ ಭಾಗದ ರೈತರು ಕೇಳಲು ಬಂದರೆ ಗೌಡರ ಜೊತೆ ಮಾತನಾಡಿ ಎಂದು ಅಮಾನುಷವಾಗಿ ಹೇಳುತ್ತಿದ್ದಾರೆ ಇದರಿಂದ ರೈತರು ಏನನ್ನೂ ಅರ್ಥ ಮಾಡಿಕೊಳ್ಳಬೇಕು ಗುತ್ತಿಗೆದಾರ ಮತ್ತು ಊರಿನ ಗೌಡ ಶಾಮೀಲಾಗಿ ಈ ರೀತಿ ಕಳಪೆ ಕಾಮಗಾರಿ ಮಾಡುತ್ತಿರುವರೇ ಎಂಬ ಅನುಮಾನಗಳು ನಮ್ಮಲ್ಲಿ ಕಾಡುತ್ತಿವೆ ಎಂದು ರೈತರು ಆಕ್ರೋಶ ಹೊರಹಾಕಿದರು.

ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿದರೆ ಮಾತ್ರ ಬಿಲ್ ಆಗಬೇಕು ಇಲ್ಲವಾದಲ್ಲಿ ಬಿಲ್ ತಡೆಯಬೇಕು ಎಂದು ಉಷಪ್ಪ ಕರಕಂಡಿಯಾಗಿ ಹೇಳಿದ್ದಾರೆ. ಈ ಭಾಗದ ವಾರ್ಡ್ ಸದಸ್ಯರುಗಳು ಕೂಡ ಯಾವುದೇ ರೀತಿಯ ಧ್ವನಿ ಎತ್ತುತ್ತಿಲ್ಲ ಮೌನವಾಗಿರುವುದು ಯಾವ ಕಾರಣಕ್ಕೆ ಎಂಬುದು ನಮಗೆ ತಿಳಿಯಬೇಕಿದೆ ಎಂದು ಪ್ರಶ್ನಿಸಿದರು.ರಸ್ತೆಯು ಸರಿಯಾದ ರೀತಿಯಲ್ಲಿ ಮುಕ್ತಾಯಗೊಳಿಸದೆ ಅರ್ಧಕ್ಕೆ ನಿಲ್ಲಿಸಿದ್ದಾರೆ ಇದರಿಂದ ಈಗ ಬಿರುಗಾಳಿ ಸಮೇತ ಮಳೆಬರುತ್ತಿದು ಒಂದು ಸಲ ಜೋರಾಗಿ ಮಳೆ ಬಂದರೆ ಸಂಪೂರ್ಣ ರಸ್ತೆ ಕುಸಿದುಹೋಗುವ ಸ್ಥಿತಿಯಲ್ಲಿದೆ ಇದರಿಂದ ರೈತರಿಗೆ ಇನ್ನಷ್ಟು ತೊಂದರೆಗೆ ಒಳಗಾಗುವಂತೆ ಮಾಡಿದ್ದಾರೆ ಎಂದು ಉಷಪ್ಪ ಹೇಳಿದರು.ಶಾಸಕರು ಹಾಗೂ ಸಚಿವರಾದ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರು ಬೇಟಿ ನೀಡಿ ರಸ್ತೆ ಪರಿಶೀಲನೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಕೂಡಲೇ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರಾದ ಉಷಪ್ಪ ಗೌಡ ಕಲಾಲ್, ನರಸಿಂಹ ಸುಗ್ಗಲ್, ಸಾಯಪ್ಪ ಕುರುಬ, ಭೀಮಾಶಪ್ಪ ಖಂಡ್ರೆಪಲ್ಲಿ, ಕಿಷ್ಟಪ್ಪ ಸುಗ್ಗಾಲ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್.

